×
Ad

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ವಿಲಿಯಮ್ಸನ್ ಗೆ ನ್ಯೂಝಿಲ್ಯಾಂಡ್ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲು ನಿರ್ಧಾರ

Update: 2023-08-09 22:34 IST

ಕೇನ್ ವಿಲಿಯಮ್ಸನ್ | Photo : PTI

ಕ್ರೈಸ್ಟ್ಚರ್ಚ್ : ಮೊಣಕಾಲು ನೋವಿನಿಂದ ಚೇತರಿಸಿಕೊಳ್ಳುತ್ತಿರುವ ನಾಯಕ ಕೇನ್ ವಿಲಿಯಮ್ಸನ್ ಅಕ್ಟೋಬರ್ ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನ ಆರಂಭಿಕ ಪಂದ್ಯಗಳಿಂದ ವಂಚಿತವಾಗುವ ಸಾಧ್ಯತೆಯಿದ್ದರೂ ಕೂಡ ಅವರನ್ನು ವಿಶ್ವಕಪ್ ಕ್ರಿಕೆಟ್ ತಂಡಕ್ಕೆ ಪರಿಗಣಿಸಲು ನ್ಯೂಝಿಲ್ಯಾಂಡ್ ನಿರ್ಧರಿಸಿದೆ.

ವಿಶ್ವಕಪ್ ಗೆ ಮೊದಲು ನಡೆಯುವ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಬಲ ಮೊಣಕಾಲುನೋವಿನಿಂದ ಬಳಲುತ್ತಿರುವ ವಿಲಿಯಮ್ಸನ್ ರನ್ನು ನಿಕಟವಾಗಿ ನಿಗಾವಹಿಸಲಾಗುತ್ತದೆ. ಎಪ್ರಿಲ್ ನಲ್ಲಿ ಐಪಿಎಲ್ ವೇಳೆ ಅವರು ಗಾಯಗೊಂಡಿದ್ದರು.

ಅಕ್ಟೋಬರ್ 5ರಂದು ನ್ಯೂಝಿಲ್ಯಾಂಡ್ ತಂಡ ಇಂಗ್ಲೆಂಡ್ ವಿರುದ್ಧ ಮೊದಲ ವಿಶ್ವಕಪ್ ಪಂದ್ಯವನ್ನು ಆಡಲಿದ್ದು, ಇದಕ್ಕೆ ಕೇವಲ 50 ದಿನಗಳು ಬಾಕಿ ಇದೆ. ವಿಲಿಯಮ್ಸನ್ಗೆ ತನ್ನ ಫಿಟ್ನೆಸ್ ಸಾಬೀತುಪಡಿಸಲು ಆಯ್ಕೆಗಾರರು ಎಲ್ಲ ಅವಕಾಶ ನೀಡಲಿದ್ದಾರೆ ಎಂದು ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.

ವಿಲಿಯಮ್ಸನ್ ಚೇತರಿಕೆಯ ಲಕ್ಷಣ ತೋರಿಸಿದರೆ, ವಿಶ್ವಕಪ್ ಗೆ ತಕ್ಷಣಕ್ಕೆ ಲಭ್ಯವಿರದೇ ಇದ್ದರೂ ಕೂಡ ಅವರನ್ನು ತಂಡಕ್ಕೆ ಪರಿಗಣಿಸಲಾಗುವುದು. ಸೆಪ್ಟಂಬರ್ 15ರ ಸುಮಾರಿಗೆ ವಿಶ್ವಕಪ್ ತಂಡ ಅಂತಿಮಗೊಳಿಸಲಾಗುವುದು ಎಂದು ಕೋಚ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News