ಮಹಿಳೆಯರ ಚೆಸ್ ವಿಶ್ವಕಪ್: ವಂತಿಕಾ, ದಿವ್ಯಾ ಪ್ರಿ-ಕ್ವಾರ್ಟರ್ ಫೈನಲ್ ಗೆ
PC : @ChessbaseIndia
ಬಾಟುಮಿ,ಜು.13: ಭಾರತೀಯ ಗ್ರ್ಯಾಂಡ್ ಮಾಸ್ಟರ್ ಗಳಾದ ವಂತಿಕಾ ಅಗರ್ವಾಲ್ ಹಾಗೂ ದಿವ್ಯಾ ದೇಶ್‌ಮುಖ್ ಅವರು ಮೂರನೇ ಸುತ್ತಿನ ಮೊದಲ ಗೇಮ್ ಗೆದ್ದ ನಂತರ ಫಿಡೆ ವಿಶ್ವ ಮಹಿಳೆಯರ ಚೆಸ್ ಕಪ್‌ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ವಂತಿಕಾ ಗರಿಷ್ಠ ರ್ಯಾಂಕಿನ ರಶ್ಯದ ಕಟೆರಿನಾ ಲಾಗ್ನೊರನ್ನು ಮಣಿಸಿದರೆ, ದಿವ್ಯಾ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿ ಸರ್ಬಿಯದ ಟೆಯೊಡೊರಾ ಇಂಜಾಕ್‌ರನ್ನು ಸೋಲಿಸಿದರು. ಸ್ಪರ್ಧೆಯಲ್ಲಿ ಉಳಿದಿರುವ ಐವರು ಭಾರತೀಯ ಚೆಸ್ ತಾರೆಯರ ಪೈಕಿ ದಿವ್ಯಾ ಫೇವರಿಟ್ ಆಗಿದ್ದಾರೆ.
ಇದೇ ವೇಳೆ ಗರಿಷ್ಠ ರ್ಯಾಂಕಿನ ಭಾರತದ ಚೆಸ್ ತಾರೆ ಕೊನೆರು ಹಂಪಿ ಪೋಲ್ಯಾಂಡ್‌ನ ಕುಲೊನ್ ಕ್ಲೌಡಿಯಾ ವಿರುದ್ಧ ಡ್ರಾಗೆ ತೃಪ್ತಿಪಟ್ಟರು. ಡಿ. ಹರಿಕಾ ಕೂಡ ಗೆಲ್ಲಲಿಲ್ಲ.ಭಾರತದ ಇನ್ನೋರ್ವ ಚೆಸ್ ತಾರೆ ಆರ್. ವೈಶಾಲಿ ಅಮೆರಿಕದ ಕಾರಿಸ್ಸಾ ಯಿಪ್ ಎದುರು ಡ್ರಾಗೆ ತೃಪ್ತಿಪಟ್ಟರು.
ಶನಿವಾರದ ಪಂದ್ಯದಲ್ಲಿ ವಂತಿಕಾ ಅವರು ರಶ್ಯದ ಆಟಗಾರ್ತಿಯ ವಿರುದ್ಧ ಮಿಂಚಿ ಎಲ್ಲರ ಗಮನ ಸೆಳೆದರು.