×
Ad

ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ : ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶಕ್ಕೆ ಜಯ

Update: 2025-10-02 21:54 IST

Photo Credit: Women's World Cup

ಕೊಲಂಬೊ,ಸೆ.2: ಆರಂಭಿಕ ಆಟಗಾರ್ತಿ ರುಬಿಯಾ ಹೈದರ್(ಔಟಾಗದೆ 54 ರನ್, 77 ಎಸೆತ)ಅರ್ಧಶತಕ ಹಾಗೂ ಶೋರ್ನಾ ಅಖ್ತರ್(3-5)ನೇತೃತ್ವದ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ 3ನೇ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಪಾಕಿಸ್ತಾನವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿದೆ.

ಗುರುವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ 38.3 ಓವರ್‌ಗಳಲ್ಲಿ ಕೇವಲ 129 ರನ್‌ಗೆ ಆಲೌಟಾಯಿತು. ಪಾಕ್ ಪರವಾಗಿ ರಮೀನ್ ಶಮೀಮ್(23 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು. ಬಾಂಗ್ಲಾದೇಶ ಪರ ಶೋರ್ನಾ ಅಖ್ತರ್ ಯಶಸ್ವಿ ಪ್ರದರ್ಶನ ನೀಡಿದರೆ, ನಹಿದಾ ಅಖ್ತರ್(2-19) ಹಾಗೂ ಮರುಫಾ ಅಖ್ತರ್(2-31)ತಲಾ 2 ವಿಕೆಟ್ ಪಡೆದರು.

ಗೆಲ್ಲಲು ಸುಲಭ ಸವಾಲು ಪಡೆದ ಬಾಂಗ್ಲಾದೇಶ ತಂಡವು 31.1 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 131 ರನ್ ಗಳಿಸಿತು. ರುಬಿಯಾ ಹಾಗೂ ಶೋಭನಾ ಮೊಸ್ಟರಿ(24 ರನ್) 113 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News