ಸರಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳ 41 ಮಂದಿಗೆ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ 41 ಶಿಕ್ಷಕರು, ಉಪನ್ಯಾಸಕರು ಹಾಗೂ ಪ್ರಾಂಶುಪಾಲರನ್ನು 2026-27ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಶನಿವಾರ ಸಂಜೆ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ 20 ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 11 ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ.ಪೂ.ಶಿಕ್ಷಣ ಇಲಾಖೆಯಿಂದ ಇಬ್ಬರು ಪ್ರಾಂಶುಪಾಲರು ಮತ್ತು ಎಂಟು ಉಪನ್ಯಾಸಕರಿಗೆ ಉತ್ತಮ ಸೇವೆಗಾಗಿ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ರೂ.ನಗದು ಬಹುಮಾನ ನೀಡಲಾಗುತ್ತದೆ.
ಪ್ರಾಥಮಿಕ ವಿಭಾಗ : ದೇವನಹಳ್ಳಿ ತಾಲೂಕಿನ ಸ.ಕಿ.ಪ್ರಾ.ಶಾಲೆಯ ಸಿ.ಉಮಾ, ಚಿಕ್ಕೋಡಿಯ ಕೆಎಚ್‌ಪಿಎಸ್‌ನ ಬಸಪ್ಪ ಪರಪ್ಪ ಪಾಟೀಲ, ಕುಂದಾಪುರ ಹೆಸಕುತ್ತೂರಿನ ಸ.ಹಿ.ಪ್ರಾ.ಶಾಲೆಯ ಅಶೋಕ, ರಾಯಚೂರಿನ ದೇವದುರ್ಗದ ಸ.ಕಿ.ಪ್ರಾ.ಶಾಲೆಯ ಸುರೇಶ್.ಕೆ, ವಿಜಯಪುರ ಕೆಂಗಲಗುತ್ತಿಯ ಸ.ಹಿ.ಪ್ರಾ.ಶಾಲೆಯ ಹನುಮಂತ ಕಲ್ಲಪ್ಪಕಾತರಕಿ, ಹೊನ್ನಾವರ ಸ.ಹಿ.ಪ್ರಾ.ಶಾಲೆಯ ಉಷಾ ವಿ.ನಾಯಕ, ಚಿಂತಾಮಣಿ ಗುಟ್ಟಹಳ್ಳಿಯ ಸ.ಕಿ.ಪ್ರಾ.ಶಾಲೆಯ ಮಸ್ತಾನ್ ವಲಿ, ಬೆಳಗಾವಿ ಗ್ರಾಮಾಂತರ ಜಾರವಾಡಿ ಮರಾಠಿ ಹಿ.ಪ್ರಾ.ಶಾಲೆಯ ಪ್ರಭಾವತಿ ಬಾಳಪ್ಪ ಹಾಲೆನ್ನವರ, ಕೊಳ್ಳೇಗಾಲ ಸತ್ತೇಗಾಲ ಅಗ್ರಹಾರದ ಸರೋಜಮ್ಮ, ಆಳಂದ ಗುಂಜಬಬಲಾದ ನಿಂಗಪ್ಪ, ಬೆಂಗಳೂರು ದಕ್ಷಿಣ ವಲಯದ ಕೆಂಬತ್ತಹಳ್ಳಿ ಶಾಲೆಯ ರತ್ನಮ್ಮ ಎನ್.ಎಂ., ಜಮಖಂಡಿ ತೇರದಾಳದ ಶ್ರೀಜಿನಸೇನಾಚಾರ್ಯ ಹಿ.ಪ್ರಾ.ಶಾಲೆಯ ನೇಮಣ್ಣ ಬಮ್ಮಣ್ಣ ಜಮಖಂಡಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇವರೊಂದಿಗೆ ಯಲ್ಲಾಪುರದ ಗಣಪತಿಗಲ್ಲಿಯ ರಾಮಚಂದ್ರ ಈ.ನಾಯ್ಕ, ಕೊರಟಗೆರೆ ಮುದಿಗೌಡನಹನಹಟ್ಟಿಯ ಮಾಲಿನಿ ಎಂ, ಶಿಕಾರಿಪುರ ಚಿಕ್ಕಮಾಗಡಿ ತಾಂಡದ ಕುಮಾರನಾಯ್ಕ ಬಿ.ಡಿ., ಬೆಂಗಳೂರು ಉತ್ತರ ವಲಯದ ಗೃಹಲಕ್ಷ್ಮೀ ಬಡಾವಣೆಯ ಕೃಷ್ಣಮೂರ್ತಿ ಕೆ.ಎಸ್, ಹೊನ್ನಾಳಿ ಸದಾಶಿವಪುರದ ಮಲ್ಲಿಕಾರ್ಜುನ ಬಡಿಗೇರ, ತುರುವೇಕೆರೆ ಹೆಗ್ಗೆರೆಯ ಪ್ರೇಮಕುಮಾರ್ ವಿ.ಎಸ್, ಸಿರಗುಪ್ಪ ಕೊಂಚಿಗೇರಿಯ ದುರಗಪ್ಪ ಎಚ್. ಹಾಗೂ ಗಂಗಾವತಿ ಹನವಾಳದ ಮೈಲಾರಪ್ಪ ಬೂದಿಹಾಳ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಪ್ರೌಢಶಾಲಾ ವಿಭಾಗ: ಹಳಿಯಾಳ ಚಿಬ್ಬಲಗೇರಿ ಸ.ಪ್ರೌ.ಶಾಲೆಯ ಬಿರಾದಾರ ಸಿದ್ದಪ್ಪ ವೀರಭದ್ರಪ್ಪ, ಬೆಂಗಳೂರಿನ ಜೀವನ್ ಭೀಮಾನಗರ ಕೆಪಿಎಸ್‌ನ ಶೈನಾಕುಮಾರಿ ಎಂ., ಶಿವಮೊಗ್ಗ ತಮ್ಮಡಿಹಳ್ಳಿ ಸ.ಪ್ರೌ.ಶಾಲೆಯ ಕುಬೇರನಾಯ್ಕ ಬಿ, ದೇವನಹಳ್ಳಿ ಸರಕಾರಿ ಪಿಯು ಕಾಲೇಜಿನ ನೀಲಕಂಠ ಗಾವಂಕರ್, ಬಾಗೇಪಲ್ಲಿ ಗೂಳೂರು ಸ.ಪ್ರೌ.ಶಾಲೆಯ ವಿ.ವೆಂಕಟೇಶ, ಕುಮಟ ಅಘನಾಶಿನಿ ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆಯ ಮಮತಾ ಆರ್.ನಾಯ್ಕ, ಬಂಟ್ವಾಳ ಮೊಡಂಕಾಪು ಕಾರ್ಮೆಲ್ ಹೈಸ್ಕೂಲ್‌ನ ರೋಶನ್ ಅಲೆಕ್ಸಾಂಡರ್, ಮೈಸೂರು ದಕ್ಷಿಣ ತಾಲೂಕಿನ ಸರಕಾರಿ ಆದರ್ಶ ವಿದ್ಯಾಲಯದ ಜಯಶೀಲ, ಚಿಕ್ಕಮಗಳೂರು ನರಸಿಂಹರಾಜಪುರದ ಮುತ್ತಿನಕೊಪ್ಪ ಸರಕಾರಿ ಪ್ರೌಢಶಾಲೆಯ ಮಥಾಯಿ ಟಿ, ದಾವಣಗೆರೆ ನಿಟ್ಟುವಳ್ಳಿ ಸ.ಹಿ.ಪ್ರಾ.ಶಾಲೆಯ ಜಯಪ್ಪ ಕೆ.ಟಿ. ಹಾಗೂ ವಿಜಯಪುರ ಗ್ರಾಮಾಂತರ ಟಕ್ಕಲಕಿ ಸ.ಪ್ರೌ.ಶಾಲೆಯ ವಿಶೇಷ ಶಿಕ್ಷಕ ಆನಂದ ಮಾದೇವ ಝಂಡೆ ಆಯ್ಕೆಯಾಗಿದ್ದಾರೆ.
ಪಿಯು ವಿಭಾಗದಲ್ಲೂ ಸಾಧಕರಿಗೆ ಮನ್ನಣೆ
ರಾಜ್ಯ ಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ರಾಜಾಜಿನಗರ ಸ.ಪ.ಪೂ.ಕಾಲೇಜಿನ ಶ್ರೀಕಂಠಯ್ಯ ಹಾಗೂ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸರಕಾರಿ ಎಸ್‌ಕೆವಿಡಿ ಪ.ಪೂ.ಕಾಲೇಜಿನ ಬಿ.ಜೈರಾಮ್ ಆಯ್ಕೆಯಾಗಿದ್ದಾರೆ.
ಉತ್ತಮ ಉಪನ್ಯಾಸಕ ಪ್ರಶಸ್ತಿಗೆ ಮೈಸೂರು ಕೆ.ಆರ್.ನಗರ ಬಾಲಕಿಯರ ಸರಕಾರಿ ಪಿಯು ಕಾಲೇಜಿನ ಶ್ರೀನಿವಾಸ ಡಿ, ನಗರದ ಮಲ್ಲೇಶ್ವರದ ಎಸ್‌ಎಚ್‌ಎನ್‌ವಿಎಂ ಬಾಲಕಿಯರ ಪಿಯು ಕಾಲೇಜಿನ ಎಲ್.ಸೌಮ್ಯ, ವಾಣಿ ವಿಲಾಸ ಬಾಲಕಿಯರ ಸರಕಾರಿ ಪಿಯು ಕಾಲೇಜಿನ ಎಚ್.ಪ್ರಮೀಳಾ, ಮೈಸೂರಿನ ಕುವೆಂಪುನಗರ ಸರಕಾರಿ ಪಿಯು ಕಾಲೇಜಿನ ಎಚ್.ವಿ.ವಾಸು, ವಿಜಯಪುರದ ಎಸ್‌ಇಸಿಎಬಿ ಬಾಲಕಿಯರ ಪಿಯು ಕಾಲೇಜಿನ ನಜೀಮಾ ಜಂಷೇದ್ ಖಾನ್ ಪಠಾಣ್, ಚಿಕ್ಕೋಡಿ ಸರಕಾರಿ ಪಿಯು ಕಾಲೇಜಿನ ನಿಂಗಪ್ಪ ಕುರುಬರ, ದಕ್ಷಿಣ ಕನ್ನಡ ಉಪ್ಪಿನಂಗಡಿ ಸರಕಾರಿ ಪಿಯು ಕಾಲೇಜಿನ ಇಬ್ರಾಹಿಂ ಎಂ. ಹಾಗೂ ಕಲಬುರಗಿ ಜೇವರ್ಗಿಯ ಸವಿತಾ ಬಿ. ಆಯ್ಕೆಯಾಗಿದ್ದಾರೆ.
ಎರಡು ಶಾಲೆಗಳಿಗೆ ಅತ್ಯುತ್ತಮ ಶಾಲೆ ಪ್ರಶಸ್ತಿ
ದಿವಂಗತ ಶಿಕ್ಷಣ ಸಚಿವ ಗೋವಿಂದ ಗೌಡ ಎಚ್.ಜಿ. ಅವರ ಹೆಸರಿನಲ್ಲಿ ನೀಡಲಾಗುವ ಅತ್ಯುತ್ತಮ ಶಾಲೆ ಪ್ರಶಸ್ತಿಗೆ ಈ ಬಾರಿ ಎರಡು ಶಾಲೆಗಳು ಆಯ್ಕೆಯಾಗಿವೆ. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶಿರಸಿ-ಹಳಿಯಾಳ ತಾಲೂಕಿನ ಶಾಸಕರ ಸರಕಾರಿ ಮಾದರಿ ಶಾಲೆ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕರಿಕಟ್ಟಿ ಸರಕಾರಿ ಪ್ರೌಢಶಾಲೆ ಪ್ರಶಸ್ತಿಗೆ ಪಾತ್ರವಾಗಿವೆ.
ಮಹಿಳಾ ಶಿಕ್ಷಕಿಯರಿಗೆ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ.