ರಾಜ್ಯಾದ್ಯಂತ ಶೇ.63.03ರಷ್ಟು ಸಮೀಕ್ಷೆ ಪೂರ್ಣ
Update: 2025-10-03 23:58 IST
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಶೇ.63.03ರಷ್ಟು ಪೂರ್ಣಗೊಂಡಿದ್ದು, ಇದುವರೆಗೆ 3.42 ಕೋಟಿ ಜನರ ಸಮೀಕ್ಷೆ ಮುಗಿದಿದೆ. ಹಾಗೆಯೇ ಎಲ್ಲ ಜಿಲ್ಲೆಗಳ 90,61,880 ಕುಟುಂಬಗಳ ಸಮೀಕ್ಷೆಯು ಪೂರ್ಣಗೊಂಡಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಶುಕ್ರವಾರದಂದು ಅಂಕಿ-ಅಂಶಗಳನ್ನು ಪ್ರಕಟಿಸಿದೆ.
ರಾಜ್ಯದಲ್ಲಿ 1,43,77,978 ಕುಟುಂಬಗಳನ್ನು ಸಮೀಕ್ಷೆಯಲ್ಲಿ ಒಳಪಡಿಸುವ ಗುರಿಯನ್ನು ಸರಕಾರ ಇಟ್ಟುಕೊಂಡಿದೆ. ಇದುವರೆಗೂ ಸಮೀಕ್ಷೆಯಲ್ಲಿ ಒಟ್ಟು 3,42,31,444 ಜನರು ಭಾಗವಹಿಸಿದ್ದಾರೆ. ಅ.2ರ ವೇಳೆಗೆ 81,27,206 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿತ್ತು. ಶುಕ್ರವಾರ ಒಂದೇ ದಿನ 9,35,044 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ ಎಂದು ತಿಳಿಸಿದೆ.