×
Ad

ವಿಜಯನಗರ| ಸರಣಿ ಅಪಘಾತ: ಒಂದೇ ಕುಟುಂಬದ 7 ಮಂದಿ ಮೃತ್ಯು

Update: 2023-10-09 22:10 IST

ಸಾಂದರ್ಭಿಕ ಚಿತ್ರ 

ವಿಜಯನಗರ: ಎರಡು ಲಾರಿ ಮತ್ತು ಕ್ರೂಸರ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ದೇವಸ್ಥಾನಕ್ಕೆ ಹೋಗಿ ಮನೆಗೆ ಮರಳುತ್ತಿದ್ದ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿರುವ ಘಟನೆ ಹೊಸಪೇಟೆ ಹೊರವಲಯದ ವ್ಯಾಸನಕೇರಿ ಬಳಿ ವರದಿಯಾಗಿದೆ.

ಮೃತರನ್ನು ಉಮಾ(45), ಕೆಂಚವ್ವ(80), ಭಾಗ್ಯ(32), ಅನಿಲ್(30), ಗೋಣಿಬಸಪ್ಪ(65), ಯುವರಾಜ(4), ಭೀಮಲಿಂಗ(50) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಹೊಸಪೇಟೆ ಉಕ್ಕಡ ಕೇರಿ ನಿವಾಸಿ ಗೋಣಿ ಬಸಪ್ಪ ಎಂಬುವರ ಕುಟುಂಬಸ್ಥರು ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಹಿಂದಿರುಗುವ ವೇಳೆ ಎರಡು ಲಾರಿ ಮತ್ತು ಕುಟುಂಬಸ್ಥರು ಇದ್ದ ಕ್ರೂಸರ್ ವಾಹನದ ಮಧ್ಯೆ ಢಿಕ್ಕಿಯಾಗಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News