×
Ad

ಜೂನ್ 2026ರೊಳಗೆ ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್ ಗೇಟ್ : ಡಿ.ಕೆ.ಶಿವಕುಮಾರ್

Update: 2025-12-18 18:46 IST

ಬೆಳಗಾವಿ : ಡಿಸೆಂಬರ್-2025ರ ಅಂತ್ಯದಲ್ಲಿ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣೆ ಮಟ್ಟ 1,613 ಅಡಿಗೆ ಬಂದ ನಂತರ ಜಲಾಶಯಕ್ಕೆ ಹೊಸ ಕ್ರಸ್ಟ್ ಗೇಟುಗಳ ಅಳವಡಿಕೆ ಪ್ರಾರಂಭಿಸಲು ಹಾಗೂ ಜೂನ್-2026ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಗುರುವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಸನಗೌಡ ಬಾದರ್ಲಿ ಪ್ರಶ್ನೆಗೆ ಉತ್ತರಿಸಿದ ಅವರು, ತುಂಗಭದ್ರಾ ಅಣೆಕಟ್ಟೆಯ ಎಲ್ಲಾ 33 ಗೇಟುಗಳ ಬದಲಾವಣೆ ಕಾಮಗಾರಿಯನ್ನು ತುಂಗಭದ್ರಾ ಮಂಡಳಿಯಿಂದ ಕೈಗೆತ್ತಿಕೊಳ್ಳಲಾಗಿದ್ದು, ರಾಜ್ಯ ಸರಕಾರದಿಂದ ಮುಂಗಡವಾಗಿ 10 ಕೋಟಿ ರೂ. ಅನುದಾನವನ್ನು ಮಂಡಳಿಗೆ ಒದಗಿಸಲಾಗಿದೆ ಎಂದರು.

ತುಂಗಭದ್ರಾ ಮಂಡಳಿಯು ಗೇಟ್ ನಂ.19ಕ್ಕೆ ಹೊಸ ಗೇಟನ್ನು ಅಳವಡಿಸುವಿಕೆ ಕಾಮಗಾರಿಯನ್ನು 1.66 ಕೋಟಿ ರೂ. ಮೊತ್ತಕ್ಕೆ ಹಾಗೂ ಬಾಕಿ 32 ಗೇಟುಗಳನ್ನು ಬದಲಾಯಿಸುವ ಕಾಮಗಾರಿಯನ್ನು 34.48 ಕೋಟಿ ರೂ. ಮೊತ್ತಕ್ಕೆ ಮೆಸರ್ಸ್ ಹಾರ್ಡ್‍ವೇರ್ ಟೂಲ್ಸ್ ಅಂಡ್ ಮೆಷಿನರಿ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್, ಅಹಮದಾಬಾದ್ ಇವರಿಗೆ ವಹಿಸಿರುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News