×
Ad

ಆಟ ಆಡುತ್ತಿದ್ದ ವೇಳೆ ಮನೆ ಎದುರಿನ ಚರಂಡಿಗೆ ಬಿದ್ದು 2 ವರ್ಷದ ಮಗು ಮೃತ್ಯು

Update: 2023-08-24 18:23 IST

ಅಬ್ದುಲ್ ರಹಿಮಾನ್‌- ಮೃತ ಮಗು

ಕಲಬುರಗಿ,ಆ.24: ಆಟ ಆಡುತ್ತಿದ್ದ ವೇಳೆ  ಮಗುವೊಂದು ಮನೆ ಎದುರಿನ ಚರಂಡಿಗೆ ಬಿದ್ದು ಮೃತಪಟ್ಟ ಘಟನೆ ಕಲಬುರಗಿ ನಗರದ ಹಾಗರಗಾ ಪ್ರದೇಶದ ಸಪ್ನಾ ಬೇಕರಿಯ ಮುಜಾಹಿರ್ ನಗರದಲ್ಲಿ ಗುರುವಾರ ಮಧ್ಯಾಹ್ನ ವರದಿಯಾಗಿದೆ.

ಸೋನಿಯಾ ಗಾಂಧಿ ಕಾಲೋನಿಯ ನಿವಾಸಿಯಾಗಿರುವ ಮುಹಮ್ಮದ್ ಬುರ್‌ಹಾನುದ್ದೀನ್ ಅವರ ಪುತ್ರ ಅಬ್ದುಲ್ ರಹಿಮಾನ್‌ (2) ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. 

ಗುರುವಾರ ಮಧ್ಯಾಹ್ನ ಮಗು ಆಟ ಆಡುತ್ತಾ ಮನೆಯ ಎದುರಿಗೆ ಇರುವ ಒಳಚರಿಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ನಗರದ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. 

ಸ್ಥಳೀಯ ನಿವಾಸಿಗಳ ಆಕ್ರೋಶ

ಬಡಾವಣೆಯಲ್ಲಿ ಸೂಕ್ತ ಒಳಚರಿಂಡಿ ವ್ಯವಸ್ಥೆ ಇಲ್ಲದೇ ಈ ಘಟನೆ ನಡೆದಿದೆ ಎಂದು ಸ್ಥಳೀಯ ನಿವಾಸಿಗಳು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ತಕ್ಷಣ ಜಿಲ್ಲಾಡಳಿತ ಎಚ್ಚತುಗೊಂಡು ಇಂತಹ ಘಟನೆಗಳು ತಡೆಯು ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News