×
Ad

ಸಾಲಬಾಧೆಯಿಂದ ಮನನೊಂದು ರೈತ ಆತ್ಮಹತ್ಯೆ

Update: 2023-10-18 13:38 IST

ಮಂಜುನಾಥ - ಮೃತ ರೈತ

ಚಿಕ್ಕಮಗಳೂರು : ಜಿಲ್ಲೆಯ ಕಡೂರು ತಾಲೂಕಿನ ಹಿರೇನಲ್ಲೂರು ಹೋಬಳಿಯ ಕೇದಿಗೆರೆ ಗ್ರಾಮದ ರೈತ ಸಾಲಬಾಧೆ ತಾಳಲಾರದೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. 

ಕೇದಿಗೆರೆ ಗ್ರಾಮದ ಮಂಜುನಾಥ( 38) ಮೃತ ರೈತ ಎಂದು ಗುರುತಿಸಲಾಗಿದೆ. 

ಮಂಜುನಾಥ ತನ್ನ ತಂದೆಗೆ ಸೇರಿದ 2 ಎಕರೆ  ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದ, ಇತ್ತೀಚೆಗೆ ಸೂರ್ಯಕಾಂತಿ, ನೆಲಗಡಲೆ, ಈರುಳ್ಳಿ ಬೆಳೆಯಲು ವಿವಿಧ ಬ್ಯಾಂಕ್ ಹಾಗೂ ಫೈನಾನ್ಸ್  ಮತ್ತಿತರ ಕಡೆಗಳಲ್ಲಿ  ಸುಮಾರು 5 ಲಕ್ಷ ರೂ ಸಾಲ ಮಾಡಿಕೊಂಡಿದ್ದರು. ಬೆಳೆ ಸರಿಯಾಗಿ ಬರದ ಕಾರಣ ಮನನೊಂದು ಅವರ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮೃತನ ಪತ್ನಿ ರೇಣುಕಮ್ಮ ನೀಡಿದ ದೂರಿನ ಆಧಾರದಲ್ಲಿ ಯಗಟಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ  ವೈದ್ಯರು ಶವಪರೀಕ್ಷೆ ನಡೆಸಿ ವರದಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News