×
Ad

ಶಿಂಷಾನದಿ ಜಲಪಾತದಲ್ಲಿ ಈಜಲು ಹೋಗಿದ್ದ ಯುವಕ ನೀರು ಪಾಲು

Update: 2023-08-26 19:26 IST

ಮಂಡ್ಯ, ಆ.26: ಮಳವಳ್ಳಿ ತಾಲೂಕು ಹಲಗೂರು ಸಮೀಪದ ಶಕುನಿದೊಡ್ಡಿ ಬಳಿಯ ಶಿಂಷಾನದಿ ಜಲಪಾತದಲ್ಲಿ ಶುಕ್ರವಾರ ಈಜಲು ಹೋಗಿದ್ದ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಭದ್ರೇನಹಳ್ಳಿಯ ಮಾರಪ್ಪ ಶೆಟ್ಟಿ ಅವರು ಪುತ್ರ ಮನುಕುಮಾರ್ ಎಂಬ ಯುವಕ ಸಾವನ್ನಪ್ಪಿದ್ದಾನೆ.

ಖಾಸಗಿ ಬಸ್ ಚಾಲಕನಾಗಿದ್ದ ಮನುಕುಮಾರ್ ಏಳು ವರ್ಷದಿಂದ ಹಲಗೂರಿನಲ್ಲಿ ವಾಸವಿದ್ದ. ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಬಸ್‍ಗಳ ಓಡಾಟ ಸ್ಥಗಿತಗೊಂಡಿದ್ದರಿಂದ ಮೂವರು ಗೆಳಯರ ಜತೆ ಜಲಪಾತ ನೋಡಲು ಹೋಗಿದ್ದ ಎನ್ನಲಾಗಿದೆ.

ಜಲಪಾತದಲ್ಲಿ ಈಜುಡುವಾಗ ಸುಳಿಗೆ ಸಿಲುಕಿ ಮುಳುಗಿದ್ದಾನೆ. ಈಜುದಾರರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಹಲಗೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News