×
Ad

ಹುಲಿ ಉಗುರು ಧರಿಸಿದ ಆರೋಪ; ಅರಣ್ಯ ಅಧಿಕಾರಿ ಅಮಾನತು

Update: 2023-10-27 13:56 IST

ದರ್ಶನ್ - ಅಮಾನತುಗೊಂಡಿರುವ ಅಧಿಕಾರಿ 

ಚಿಕ್ಕಮಗಳೂರು, ಆ.27: ಹುಲಿ ಉಗುರು ಇರುವ ಆಭರಣ ಧರಿಸಿದ್ದ ಆರೋಪದಲ್ಲಿ ಜಿಲ್ಲೆಯ ಕಳಸ ತಾಲೂಕಿನಲ್ಲಿ ಡಿಆರ್ ಎಫ್‍ಒ ಆಗಿ ಕೆಲಸ ಮಾಡುತ್ತಿದ್ದ ಆಲ್ದೂರು ಮೂಲದ ದರ್ಶನ್ ಎಂಬವರನ್ನು ಅಮಾಮನತು ಮಾಡಲಾಗಿದೆ. 

ದರ್ಶನ್ ಅವರು ಧರಿಸಿರುವ ಆಭರಣದಲ್ಲಿ ಹುಲಿ ಉಗುರು ಇದ್ದು, ಈ ಅಧಿಕಾರಿಯನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಆಲ್ದೂರು ಹೋಬಳಿ ವ್ಯಾಪ್ತಿಯ ಅರೇನೂರು ಗ್ರಾಮದ ಸುಪ್ರೀತ್ ಹಾಗೂ ಅಬ್ದುಲ್ ಎಂಬವರು ಆಲ್ದೂರು ವಲಯದ ಅರಣ್ಯಾಧಿಕಾರಿಗೆ ದೂರು ನೀಡಿದ್ದರು. 

ಇದೀಗ ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೊಪ್ಪ ಡಿ.ಎಫ್.ಓ. ನಂದೀಶ್ ಅವರು ಡಿಆರ್ ಎಫ್‍ಒ ದರ್ಶನ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News