ಬಿ.ಎಡ್ ಕೋರ್ಸ್‍ಗೆ ಪ್ರವೇಶಾತಿ : ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟ
Update: 2023-12-13 20:25 IST
ಬೆಂಗಳೂರು: ಪ್ರಸಕ್ತ ವರ್ಷದ ಬಿ.ಎಡ್ ಕೋರ್ಸ್‍ನ ವ್ಯಾಸಂಗಕ್ಕಾಗಿ ಸರಕಾರಿ ಕೋಟಾದ ಸೀಟುಗಳ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಗಾಗಿ ರೋಸ್ಟರ್ ಮತ್ತು ಮೆರಿಟ್ ಅನ್ವಯ 1:2 ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಪ್ರಕಟಿಸಲಾಗಿದೆ.
ಪಟ್ಟಿಯಲ್ಲಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಆಯ್ಕೆ ಮಾಡಿಕೊಂಡ ನೋಡೆಲ್ ಕೇಂದ್ರಕ್ಕೆ ಮೂಲದಾಖಲೆಗಳೊಂದಿಗೆ ವೇಳಾಪಟ್ಟಿಯಲ್ಲಿ ನಿಗದಿಪಡಿಸಿದ ದಿನಾಂಕಗಳಂದು ಪರಿಶೀಲನೆ ಕಡ್ಡಾಯವಾಗಿ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ www.schooleducation.karnataka.gov.in ಅನ್ನು ಸಂಪರ್ಕಿಸುವಂತೆ ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.