ಬೆಂಗಳೂರು : ಕರ್ತವ್ಯನಿರತ ಸಂಚಾರ ಪೊಲೀಸ್ ಅಧಿಕಾರಿಯ ಮೇಲೆ ಕಾರು ಹರಿಸಿ ಗಾಯಗೊಳಿಸಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಪ್ರಕರಣ ರದ್ದು ಕೋರಿ ನಾಗರಭಾವಿಯ ರಾಮಾಂಜಲು ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕಾರನ್ನು ಬೆದರಿಕೆ ಅಥವಾ ಹಿಂಸೆಯ ಸಾಧನವಾಗಿ ಪರಿವರ್ತಿಸಲು ಅನುಮತಿಸಲಾಗುವುದಿಲ್ಲ. ಪ್ರಕರಣದಲ್ಲಿನ ಆರೋಪಗಳನ್ನು ಪರೀಕ್ಷಿಸದೆಯೇ ವಿಚಾರಣೆ ರದ್ದುಗೊಳಿಸಿದರೆ ಕಾನೂನಿನ ನಿಯಮವೇ ತನ್ನ ಅರ್ಥ ಕಳೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಕಾನೂನುಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯ ಮೇಲೆ ಕಾರು ಚಲಾಯಿಸಿ ದುರಹಂಕಾರ ಪ್ರದರ್ಶಿಸಿರುವ ಆರೋಪಿಯ ನಡೆಗೆ ರಿಯಾಯಿತಿ ತೋರಲು ಸಾಧ್ಯವೇ ಇಲ್ಲ ಎಂದು ನ್ಯಾಯಾಲಯ ಕಟುವಾಗಿ ನುಡಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor