×
Ad

ಅನೈತಿಕ ಚಟುವಟಿಕೆ ಆರೋಪ: ಬ್ಯೂಟಿ ಪಾರ್ಲರ್ ಮೇಲೆ ದಾಳಿ; ಯುವತಿಯರ ರಕ್ಷಣೆ

Update: 2023-09-02 20:21 IST

ಮೈಸೂರು,ಸೆ.2: ನಗರದ ಅಗ್ರಹಾರದ ಕಟ್ಟಡವೊಂದರಲ್ಲಿ ವ್ಯವಹರಿಸುತ್ತಿದ್ದ ಬ್ಯೂಟಿಪಾರ್ಲರ್ ಗೆ ಶುಕ್ರವಾರ ಸಂಜೆ ದಾಳಿ ನಡೆಸಿದ ಕೃಷ್ಣರಾಜ ಪೊಲೀಸರು ಐವರು ಯುವತಿಯನ್ನು ರಕ್ಷಿಸಿದ್ದಾರೆ.

ಆದ್ಯಾ ಬ್ಯೂಟಿ ಪಾರ್ಲರ್ ಹಾಗೂ ಕ್ಯುಟೆಕ್ ಎಂಬ ಬ್ಯೂಟಿಪಾರ್ಲರ್‌ ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಒಡನಾಡಿ ಸಂಸ್ಥೆಗೆ ಲಭಿಸಿತ್ತು. ಸಂಸ್ಥೆಯು ಈ ಬಗ್ಗೆ ವಾಟ್ಸ್ ಆಪ್ ಸಂದೇಶಗಳು, ವಿಡಿಯೊ ದಾಖಲೆಗಳನ್ನು ಸಂಗ್ರಹಿಸಿಕೊಂಡು ಕೃಷ್ಣರಾಜ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆ ದೊರೆತಿವೆ. ಇದರ ಆಧಾರದಲ್ಲಿ ದಾಳಿ ನಡೆಸಿ ದೀಪು, ರಾಹುಲ್ ವಿಜಯ್, ಸ್ವಾಮಿ, ಗುರುಪ್ರಸಾದ್, ರಾಹುಲ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸ್ ಇನ್ಸ್‍ಪೆಕ್ಟರ್ ನಾಗೇಗೌಡ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪ್ರದೀಪ್, ಸುಮ, ರಶ್ಮಿ, ಭಾನು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News