×
Ad

ದಸರಾ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ಐವರ ವಿರುದ್ಧ ಎಫ್‌ಐಆರ್‌

Update: 2023-10-21 21:25 IST

ಮೈಸೂರು,ಅ.21: ದಸರಾ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ವೈ.ರಾಜು, ಅರುಣ್ ಕೌಶಿಕ್ ಮೇಲೆ ನಡುರಸ್ತೆಯಲ್ಲೇ ಹಲ್ಲೆ ಮಾಡಿರುವ ಘಟನೆ ಸಂಬಂಧ ಬೆಂಗಳೂರಿನ ಐವರ ಮೇಲೆ ಪ್ರಕರಣ ದಾಖಲಾಗಿದೆ.

ಮೈಸೂರಿನ ಹಾರ್ಡಿಂಗ್ ಸರ್ಕಲ್ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ವೈ.ರಾಜು, ಅರುಣ್ ಕೌಶಿಕ್ ಅವರು ರಸ್ತೆಯಲ್ಲಿ ಜನಸಂದಣಿ ನಿಯಂತ್ರಿಸಲು ಜನರನ್ನು ಬೇಗ ಹೋಗುವಂತೆ ಹೇಳುತ್ತಿದ್ದರು. ಟ್ರಾಫಿಕ್ ಜಾಮ್ ಆಗುತ್ತೆ ಮುಂದೆ ಹೋಗಿ, ಬೇಗ ಹೋಗಿ ಎಂದಿದ್ದಕ್ಕೆ ಐವರು ಸೇರಿಕೊಂಡು ಪೊಲೀಸರ ಮೇಲೆಯೇ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಲಾಗಿದೆ.

ಘಟನೆ ಸಂಬಂಧ ದಸರಾ ವೀಕ್ಷಣೆಗೆ ಬಂದಿದ್ದ ಬೆಂಗಳೂರು ಮೂಲದ ಉಮೇಶ್, ಹರೀಶ್, ಧ್ರುವ, ಲತಾ, ಗಾನವಿ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News