×
Ad

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ; ಪತಿಯ ವಿರುದ್ಧ ದೂರು

Update: 2023-07-11 22:23 IST

ಅರ್ಶಿಯಾ ಬಾನು-ಮೃತ ಮಹಿಳೆ

ಹಾಸನ, ಜು.11: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಮೈಸೂರಿನ ಎನ್.ಆರ್.ಮೊಹಲ್ಲಾದ ಮನೆಯೊಂದರಲ್ಲಿ ಪತ್ತೆಯಾಗಿದರುವುದು ವರದಿಯಾಗಿದೆ.

ಮೃತರನ್ನು ಹಾಸನದ ಮೆಹಬೂಬ್ ನಗರ ಈದ್ಗಾ ನಿವಾಸಿ ಅರ್ಶಿಯ ಬಾನು ( 27) ಎಂದು ಗುರುತಿಸಲಾಗಿದೆ. ಇವರನ್ನು ಸಕಲೇಶಪುರ ತಾಲೂಕಿನ ಬೆಳಗೋಡು ಗ್ರಾಮದ ನಿವಾಸಿ ತಬ್ರೇಝ್ ಅಲಿ(35)ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ 1 ವರ್ಷ 6 ತಿಂಗಳಿನ ಒಂದು ಮಗು ಇದೆ ಎಂದು ತಿಳಿದು ಬಂದಿದೆ.

ಅರ್ಶಿಯ ಬಾನುಗೆ ಪತಿ ತಬ್ರೇಝ್ ಅಲಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ, ಈತನಿಗೆ ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ಕಾರು, ಹಣ, ಚಿನ್ನವನ್ನು ಎಲ್ಲವನ್ನೂ ಕೊಟ್ಟಿದ್ದರೂ ನನ್ನ ಪುತ್ರಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೋಷಕರು ಎನ್.ಆರ್.ಮೊಹಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News