×
Ad

ಸಂವಿಧಾನ ಬದಲಿಸುವ ಹೇಳಿಕೆ ನೀಡಿದ್ದ ಅನಂತಕುಮಾರ್ ಹೆಗ್ಡೆ ಒಬ್ಬ ಹುಚ್ಚ: ಬಿಜೆಪಿ ನಾಯಕ ಎನ್. ರವಿಕುಮಾರ್

Update: 2024-11-29 12:10 IST

 ಚಿತ್ರದುರ್ಗ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸಂಸದ  ಅನಂತ ಕುಮಾರ್ ಹೆಗಡೆ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.

 ನಗರದ ಕ್ರೀಡಾಭವನದಲ್ಲಿ ಸಿಟಿಜನ್ ಫಾರ್ ಸೋಶಿಯಲ್ ಜಸ್ಟೀಸ್ ವೇದಿಕೆಯಿಂದ ಆಯೋಜಿಸಲಾಗಿದ್ದ ಸಂವಿಧಾನ ಸನ್ಮಾನ ಅಭಿಯಾನ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸಂವಿಧಾನ ಬದಲಿಸಲು ಬಂದಿದ್ದೇವೆ ಎಂದಿದ್ದ ಅನಂತಕುಮಾರ್ ಹೆಗ್ಡೆ ಒಬ್ಬ ಹುಚ್ಚ. ಏನೋ ಮಾತಿನ ಭರದಲ್ಲಿ ಹೇಳಿದ್ದಾನೆ. ಹಾಗಂತ ಪ್ರಧಾನಿ ಅಥವಾ ಆರೆಸ್ಸೆಸ್ ನ ಸರ ಸಂಘ ಚಾಲಕರು ಹೇಳಿದ್ದರಾ? ಎಂದು ಪ್ರಶ್ನಿಸಿದರು.

 ಬಿಜೆಪಿ ʼನೇಷನ್ ಫಸ್ಟ್ʼ ಸಿದ್ಧಾಂತದ ಪಕ್ಷ ಆಗಿದೆ. ದೇಶಕ್ಕೆ ಒಂದೇ ಗ್ರಂಥ ಸಂವಿಧಾನ ಎಂದು ಸ್ವೀಕರಿಸಿದ ಪಕ್ಷ ಬಿಜೆಪಿ. ದೇಶದ ಆಡಳಿತದ ಗ್ರಂಥ ಸಂವಿಧಾನ ಆಗಿದೆ. ನೆಹರು ಫ್ಯಾಮಿಲಿ ಪ್ರಕಾರ ನಡೆಯುವುದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News