×
Ad

ವಿಜ್ಞಾನ-ತಂತ್ರಜ್ಞಾನ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳ ಪ್ರಕಟ | ಡಾ.ರಾಮಕೃಷ್ಣ, ಶ್ರೀಮತಿ ಹರಿಪ್ರಸಾದ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

ಡಾ.ವಸುಂಧರಾ ಭೂಪತಿ ಸೇರಿ 33 ಮಂದಿ ಅಕಾಡೆಮಿ ಫೆಲೋಶಿಪ್‍ಗೆ ಆಯ್ಕೆ

Update: 2026-01-11 21:50 IST

ಬೆಂಗಳೂರು : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2023ನೆ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಪ್ರೊ.ಸಿ.ಎನ್.ಆರ್. ರಾವ್ ಜೀವಮಾನ ಸಾಧನೆ ಪ್ರಶಸ್ತಿಗೆ ವಿಜ್ಞಾನಿ ಡಾ.ರಾಮಕೃಷ್ಣ ಮತ್ತು ಕೆ.ಎಸ್.ಟಿ.ಎ. ಜೀವಮಾನ ಸಾಧನೆ ಪ್ರಶಸ್ತಿಗೆ ವಿಜ್ಞಾನಿ ಶ್ರೀಮತಿ ಹರಿಪ್ರಸಾದ್ ಆಯ್ಕೆಯಾಗಿದ್ದಾರೆ. ವೈದ್ಯೆ ಡಾ.ವಸುಂಧರಾ ಭೂಪತಿ ಸೇರಿ 33 ಮಂದಿ ಅಕಾಡೆಮಿ ಫೆಲೋಶಿಪ್‍ಗೆ ಆಯ್ಕೆಯಾಗಿದ್ದಾರೆ.

ಪ್ರೊ.ಸಿ.ಎನ್.ಆರ್.ರಾವ್ ಜೀವಮಾನ ಸಾಧನೆ ಪ್ರಶಸ್ತಿಯು 2ಲಕ್ಷ ರೂ.ಗಳ ಚಿನ್ನದ ಪದಕ ಹಾಗೂ ಒಂದು ಲಕ್ಷ ರೂ. ನಗದನ್ನು ಹೊಂದಿದೆ. ಕೆ.ಎಸ್.ಟಿ.ಎ. ಜೀವಮಾನ ಸಾಧನೆ ಪ್ರಶಸ್ತಿಯು 1 ಲಕ್ಷ ರೂ.ಗಳ ಚಿನ್ನದ ಪದಕ ಹಾಗೂ 75 ಸಾವಿರ ರೂ. ನಗದನ್ನು ಹೊಂದಿದೆ.

ಪ್ರತಿವರ್ಷ ಅಕಾಡೆಮಿ ಫೆಲೋಶಿಪ್‍ಗಳನ್ನು 12 ವಿಭಾಗಗಳಲ್ಲಿ ನೀಡಲಾಗುತ್ತಿದೆ. ಈ ವರ್ಷ ಕೃಷಿ ವಿಜ್ಞಾನ ವಿಭಾಗದಲ್ಲಿ ಡಾ. ಆರ್.ಆರ್. ಹಿಂಚಿನಳ್, ಪ್ರೊ. ಕೆ.ಎನ್. ಗಣೇಶಯ್ಯ, ಡಾ. ಅಶೋಕ್ ಎಸ್. ಆಲೂರ್, ಡಾ. ಪ್ರೇಮ್ ನಾಥ್, ಡಾ. ಚಂದ್ರಶೇಖರ ಬಿರಾದಾರ ಆಯ್ಕೆಯಾಗಿದ್ದಾರೆ.

ಪ್ರಾಣಿಶಾಸ್ತ್ರದಲ್ಲಿ ಡಾ. ಆರ್.ಎನ್. ಶ್ರೀನಿವಾಸ ಗೌಡ, ಜೈವಿಕ ತಂತ್ರಜ್ಞಾನದಲ್ಲಿ ಡಾ. ಶೋಬಿತ್ ರಂಗಪ್ಪ, ಪ್ರೊ. ಕೆಲ್ಮಣಿ ಚಂದ್ರಕಾಂತ್ ಆರ್., ರಾಸಾಯನ ಶಾಸ್ತ್ರದಲ್ಲಿ ಡಾ. ವಿ. ಕೃಷ್ಣಮೂರ್ತಿ, ಡಾ. ಸಿ.ವಿ. ಯೆಲುಮಗ್ಗಾಡ್, ಭೂ ವಿಜ್ಞಾನದಲ್ಲಿ ಡಾ. ಇ.ಟಿ. ಪುಟ್ಟಯ್ಯ, ಪ್ರೊ. ಶಾರದಾ ಶ್ರೀನಿವಾಸನ್, ಪ್ರೊ. ಮಾಧವ ಗಾಡ್ಗೀಳ್, ಡಾ. ಪ್ರಭಾಕರ್ ಸಂಗುರ್‍ಮಠ್ ಅವರು ಅಕಾಡೆಮಿ ಫೆಲೋಶಿಪ್‍ಗೆ ಆಯ್ಕೆಯಾಗಿದ್ದಾರೆ.

ತಂತ್ರಜ್ಞಾನ ವಿಭಾಗದಲ್ಲಿ ಡಾ. ಬಸವರಾಜ್ ಎಸ್ ಅನಾಮಿ, ಡಾ. ನಾಗನಗೌಡ, ಜಗನ್ನಾಥ ರೆಡ್ಡಿ ಎಚ್.ಎನ್. ಕೃಷ್ಣಮೂರ್ತಿ ಮಂಜುನಾಥ್, ಗಣಿತಶಾಸ್ತ್ರದಲ್ಲಿ ಪ್ರೊ. ಡಿ.ಎಸ್. ಗುರು, ಪ್ರೊ. ಬಿ.ಜೆ. ಗಿರೀಶ, ವೈದ್ಯಕೀಯ ವಿಭಾಗದಲ್ಲಿ ಡಾ. ಎಸ್. ಶ್ರೀಕಾಂತ, ಡಾ. ವಸುಂಧರಾ ಭೂಪತಿ, ಡಾ. ಸುಜಾತ ಎಂ. ಜಾಲಿ, ಡಾ. ಕೆ.ಎಸ್. ಶೇಖರ್, ಭೌತಶಾಸ್ತ್ರದಲ್ಲಿ ಡಾ. ಆನಂದ್ ಹಲಗೇರಿ, ಡಾ. ಎಚ್.ಎಸ್. ನಾಗರಾಜ ಅವರು ಅಕಾಡೆಮಿ ಫೆಲೋಶಿಪ್‍ಗೆ ಆಯ್ಕೆಯಾಗಿದ್ದಾರೆ.

ಸಸ್ಯಶಾಸ್ತ್ರದಲ್ಲಿ ಡಾ. ಕಂಡಿಕೆರೆ ಆರ್. ಶ್ರೀಧರ್, ಡಾ. ಎಚ್. ನಿರಂಜನ ಮೂರ್ತಿ, ವಿಜ್ಞಾನ ಮತ್ತು ಸಮಾಜ ವಿಭಾಗದಲ್ಲಿ ಜಯದೇವ ಜಿ.ಎಸ್. ಡಾ. ಎಚ್. ಪರಮೇಶ್, ಸಮಾಜ ವಿಜ್ಞಾನದಲ್ಲಿ ಪ್ರೊ. ಎಸ್. ಬಿಸಲಯ್ಯ, ಡಾ. ವೂಡೇ ಪಿ. ಕೃಷ್ಣ, ಡಾ. ಹುಳಿಕಲ್ ನಟರಾಜ್ ಅವರು ಅಕಾಡೆಮಿ ಫೆಲೋಶಿಪ್‍ಗೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಪ್ರೊ. ರಾಜಾಸಾಬ್ ಎ. ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಾಳೆ ಪ್ರಶಸ್ತಿ ಪ್ರದಾನ ಸಮಾರಂಭ: ಜ.13ರ ಬೆಳಗ್ಗೆ 11 ಗಂಟೆಗೆ ಅಕಾಡೆಮಿಯ ಕಚೇರಿಯಲ್ಲಿ ಪ್ರಶಸ್ತಿ ಹಾಗೂ ಫೆಲೋಶಿಪ್ ಪ್ರದಾನ ಸಮಾರಂಭ ನಡೆಯಲಿದ್ದು, ಸಣ್ಣ ನೀರಾವರಿ ಹಾಗೂ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಭೊಸರಾಜು ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಇಲಾಖೆಯ ನಿರ್ದೇಶಕ ಸದಾಶಿವ ಪ್ರಭು ಬಿ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News