×
Ad

ಭೀಮಾ ತೀರದಲ್ಲಿ ಮತ್ತೊಂದು ಘಟನೆ | ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಯುವಕನ ಹತ್ಯೆ

Update: 2023-10-21 12:06 IST

ಬಲಭೀಮ ಸಗರ - ಮೃತ ಯುವಕ  

ಕಲಬುರಗಿ: ಅಫಜಲಪುರ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯತ್ ಸದಸ್ಯನ ಹತ್ಯೆ ಘಟನೆ ಮರೆಮಾಚುವ ಮುನ್ನವೇ ತಾಲೂಕಿನ ಸೀಧನೂರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮತ್ತೊಂದು ಕೊಲೆ ನಡೆದಿರುವುದು ವರದಿಯಾಗಿದೆ. 

ಸೀಧನೂರ ಗ್ರಾಮದ ಬಲಭೀಮ ಸಗರ (23) ಎಂಬ ಯುವಕ ಕೊಲೆಗೀಡಾದವರು ಎಂದು ಗುರುತಿಸಲಾಗಿದೆ.

ಕೆಲ ದಿನಗಳ ಹಿಂದೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರ ಬಂದಿದ್ದ ಮೃತ ಬಲಭೀಮ ಸಗರ, ಕಲಬುರಗಿ ನಗರದಲ್ಲಿ ವಾಸವಾಗಿದ್ದರು ಎಂದು ಹೇಳಲಾಗಿದೆ.

ದಸರಾ ಹಬ್ಬದ ನಿಮಿತ್ತ ಗ್ರಾಮಕ್ಕೆ ತೆರಳಿದ್ದ ವೇಳೆ ಬಲಭೀಮ ಸಗರನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ ಎಂದು ತಿಳಿದು ಬಂದಿದೆ. 

ಹಳೇ ವೈಷ್ಯಮ್ಯ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ರೇವೂರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಫ್ಝಲ್ ಪುರ ತಾಲೂಕಿನ ಮದರಾ ( ಬಿ) ಗ್ರಾಮ ಪಂಚಾಯತ್ ಅಧ್ಯಕ್ಷ ಗೌಡಪ್ಪ ಗೌಡ ಪಾಟೀಲ್‌ ಅವರನ್ನು ಅಕ್ಟೋಬರ್‌ 13ರಂದು ದುಷ್ಕರ್ಮಿಗಳು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News