‘ಮೇಜರ್ ಧ್ಯಾನಚಂದ್, ಖೇಲ್ ರತ್ನ’ ಸೇರಿ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ
Update: 2023-11-04 22:20 IST
ಬೆಂಗಳೂರು, ನ. 4: ಕೇಂದ್ರ ಸರಕಾರವು 2023ನೆ ಸಾಲಿನ ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ, ಅರ್ಜುನ, ದ್ರೋಣಾಚಾರ್ಯ, ಧ್ಯಾನ್ ಚಂದ್, ರಾಷ್ಟ್ರೀಯ ಖೇಲ್ ರತ್ನ ಪುರಸ್ಕಾರ ಮತ್ತು ಮೌಲಾನಾ ಅಬುಲ್ ಕಲಾಂ ಆಝಾದ್ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಿದೆ.
ಈ ಪ್ರಶಸ್ತಿಗಳಿಗೆ ಅರ್ಹ ಕ್ರೀಡಾಪಟುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಆನ್‍ಲೈನ್ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಲು https://dbtyas-sports.gov.in/ ಹಾಗೂ ಹೆಚ್ಚಿನ ಮಾಹಿತಿಗೆ ಉಚಿತ ಸಹಾಯವಾಣಿ ಸಂಖ್ಯೆ 1800-202-5155/1800-258-5155 ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ನ.10 ಕೊನೆಯ ದಿನವಾಗಿದೆ ಎಂದು ಕ್ರೀಡಾ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.