8 ಬಾರಿ ಅಂಬಾರಿ ಹೊತ್ತು ಸಾಗಿದ್ದ ಅರ್ಜುನ ಆನೆ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಗೆ ಬಲಿ
Update: 2023-12-04 17:16 IST
ಮೈಸೂರು: ಹಾಸನ ಜಿಲ್ಲೆಯ ಸಕಲೇಶಪುರದ ಎಳಸೂರು ಬಳಿ ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ಕಾಡಾನೆವೊಂದು ಕೊಂಬಿನಿಂದ ತಿವಿದಿದ್ದರಿಂದ ಅರ್ಜುನ ಆನೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಅರ್ಜುನ ಆನೆ ಮೈಸೂರು ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತು ನಾಯಕನಾಗಿ ಮುನ್ನಡೆಸುತ್ತಿದ್ದ. ಅರ್ಜುನ ಆನೆಗೆ 63 ವರ್ಷ ವಯಸ್ಸಾದ ಕಾರಣ ಕಳೆದ ವರ್ಷದಿಂದ ಚಿನ್ನದ ಅಂಬಾರಿಯನ್ನು ಹೊರಿಸುತ್ತಿರಲಿಲ್ಲ. ಆದರೆ ಜಂಬೂ ಸವಾರಿ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಇದನ್ನು ಬಳಸಿಕೊಳ್ಳಲಾಗುತ್ತಿತ್ತು.
ನಾಗರಹೊಳೆ ಪ್ರದೇಶದ ಬಳ್ಳೆ ಆನೆ ಶಿಬಿರದಲ್ಲಿದ್ದ ಅರ್ಜುನ ಆನೆಯನ್ನು ಕಾಡು ಪ್ರಾಣಿಗಳ ಕೂಂಬಿಂಗ್ ಕಾರ್ಯಚರಣೆಗೆ ಬಳಸಿಕೊಳ್ಳಲಾಗುತ್ತಿತ್ತು. ಹುಲಿಗಳನ್ನು ಹಿಡಿಯುವಲ್ಲಿಯೂ ಬಹಳ ನೈಪುಣ್ಯತೆಯನ್ನು ಆನೆ ಹೊಂದಿತ್ತು.