×
Ad

ಕೆಎಸ್ಸಾರ್ಟಿಸಿಗೆ ನಾಲ್ಕು ವಿಭಾಗಗಳಲ್ಲಿ ‘ಏಷಿಯಾಸ್ ಬ್ಯುಸಿನೆಸ್ ಕ್ವಾಲಿಟಿ ಅವಾರ್ಡ್’

Update: 2023-12-30 22:15 IST

ಬೆಂಗಳೂರು: ಕೆಎಸ್ಸಾರ್ಟಿಸಿ ತನ್ನ ಉತ್ಪಾದಕತೆಯನ್ನು ಹೆಚ್ಚಿಸುವ ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ಅನುಷ್ಠಾನಗೊಳಿಸಿರುವ ಯೋಜನೆಗಳಿಗೆ ವಿಕೊನ್ನೇಕ್ಟ್ ಇಂಡಿಯಾ ಮಿಡಿಯಾ ಅಂಡ್ ರಿಸರ್ಚ್ ಸಂಸ್ಥೆಯು ನೀಡುವ ʼಏಷಿಯಾಸ್ ಬ್ಯುಸಿನೆಸ್ ಕ್ವಾಲಿಟಿʼ ಅವಾರ್ಡ್ ನಾಲ್ಕು ವಿಭಾಗಗಳಲ್ಲಿ ಲಭಿಸಿದೆ.

ಎಕ್ಸೆಲೆನ್ಸ್ ಫಾರ್ ಓವರ್ ಆಲ್ ವೆಲ್‍ಫೇರ್ ಇನಿಶಿಯೇಟೀವ್, ಔಟ್ ಸ್ಟಾಂಡಿಂಗ್ ಎಕ್ಸೆಂಪ್ಲರಿ ವರ್ಕ್ ಇನ್ ಟ್ರಾನ್ಸ್ ಪೋರ್ಟ್ ಸೆಫ್ಟಿ ವೆಲ್‍ಫೇರ್, ಮೋಸ್ಟ್ ಇನ್ನೋವೇಟೀವ್ ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ಅಂಡ್ ಮೋಸ್ಟ್ ಇನ್ನೋವೇಟಿವ್ ಡೆವೆಲಪ್‍ಮೆಂಟ್ ಫಾರ್ ಇಟ್ ಪ್ರಶಸ್ತಿಗಳು ಕೆಎಸ್ಸಾರ್ಟಿಸಿಗೆ ಲಭಿಸಿದೆ.

ಶುಕ್ರವಾರ ದಿಲ್ಲಿಯಲ್ಲಿರುವ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಲನಚಿತ್ರ ನಟಿ ಮುಗ್ದಾ ಗೊಡ್ಸೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಪ್ರಾದೇಶಿಕ ಕಾರ್ಯಾಗಾರದ ಕಾರ್ಯ ವ್ಯವಸ್ಥಾಪಕ ಎಲ್.ಜಿ. ರಘುನಾಥ್, ಎಸ್.ಎನ್.ಅರುಣ, ಕೆ.ಎನ್.ಶ್ಯಾಮಲಾ, ಉಪ ಮುಖ್ಯ ಕಾನೂನು ಅಧಿಕಾರಿ ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News