×
Ad

ಬೆಂಗಳೂರು| ಯುವಕನ ಅಪಹರಿಸಿ ಸುಲಿಗೆ; 7 ಮಂದಿ ಆರೋಪಿಗಳ ಬಂಧನ

Update: 2023-08-27 22:56 IST

ಬೆಂಗಳೂರು: ಯುವಕನನ್ನು ಅಪಹರಿಸಿ ಸುಲಿಗೆ ಮಾಡಿದ್ದ ಆರೋಪದಡಿ 7 ಮಂದಿ ಆರೋಪಿಗಳನ್ನು ಮಾರತ್‍ಹಳ್ಳಿ ಪೆÇಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಆರೋಪಿಗಳು ಮಹೇಶ್ ಎಂಬಾತನನ್ನು ಅಪಹರಿಸಿ ಸುಲಿಗೆ ಮಾಡಿದ್ದ ಹಿನ್ನೆಲೆ, ಆತನ ಸ್ನೇಹಿತ ತರುಣ್ ಎಂಬುವರು ನೀಡಿದ ದೂರಿನನ್ವಯ ಕಾರ್ಯಾಚರಣೆ ಕೈಗೊಂಡು ಆರೋಪಿಗಳಾದ ಮೋಹನ್, ನವೀನ್, ಪುನೀತ್, ಅಭಿ, ರೂಪೇಶ್ ಸೇರಿ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಸ್ನೇಹಿತನ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿ ಪಾರ್ಟಿ ಮಾಡಿ ಮದ್ಯ ಸೇವಿಸಿ ಮೋಜು ಮಾಡುತ್ತಿದ್ದಾಗ ಅವರಲ್ಲಿ ರೂಪೇಶ್ ಎಂಬಾತ ಬೀಡಾ ಅಂಗಡಿಗೆ ಬಂದು ಸಿಗರೇಟ್ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದ.

ಗಲಾಟೆ ನಡೆಯುವ ಸಮಯದಲ್ಲಿ ಅಂಗಡಿ ಬಳಿ ಹೋಗಿ ತರುಣ್ ಎಂಬಾತ ಬಾಳೆಹಣ್ಣು ಕೇಳಿದ್ದ. ಆಗ, ‘ನಾನು ಇಲ್ಲಿ ಇರುವಾಗ ನೀನು ಯಾರು ಮಧ್ಯದಲ್ಲಿ ಬಂದು ವ್ಯಾಪಾರ ಮಾಡೋಕೆ?’ ಎಂದು ತರುಣ್ ಮೇಲೆ ಆರೋಪಿ ರೂಪೇಶ್ ಜಗಳ ಮಾಡಿದ್ದಾನೆ.

ಈ ವೇಳೆಯಲ್ಲಿ ಅಲ್ಲೇ ಇದ್ದ ತರುಣ್ ಸ್ನೇಹಿತ ಮಹೇಶ್ ಜಗಳ ಬಿಡಿಸಲು ಯತ್ನಿಸಿದ್ದಾನೆ. ಆರೋಪಿ ರೂಪೇಶ್ ತನ್ನ ಸ್ನೇಹಿತರನ್ನು ಅಂಗಡಿಯ ಬಳಿಗೆ ಕರೆಯಿಸಿಕೊಂಡು ಮಹೇಶ್ ಹಾಗೂ ತರುಣ್‍ರನ್ನು ಸ್ಥಳದಿಂದ ಅಪಹರಿಸಲು ಮುಂದಾಗಿದ್ದು, ತರುಣ್ ತಪ್ಪಿಸಿಕೊಂಡು ಮಹೇಶ್ ಸಿಕ್ಕಿಬಿದ್ದಿದ್ದಾನೆ. ಆತನಿಂದ ಆರೋಪಿಗಳು ಸುಲಿಗೆ ಮಾಡಿ ದರೋಡೆ ನಡೆಸಿದ್ದಾರೆ. ಈ ಸಂಬಂಧ ತರುಣ್ ನೀಡಿದ ದೂರನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News