×
Ad

ಬ್ಯಾರೀಸ್ ಗ್ರೂಪ್ ಗೆ ಪ್ರತಿಷ್ಠಿತ 'ವರ್ಲ್ಡ್ ಸೇಫ್ಟಿ ಆರ್ಗನೈಷೇಶನ್' ಪ್ರಶಸ್ತಿ

Update: 2024-09-30 20:38 IST

ಚೆನ್ನೈ : ಪ್ರತಿಷ್ಠಿತ ವರ್ಲ್ಡ್ ಸೇಫ್ಟಿ ಆರ್ಗನೈಷೇಶನ್ (ಡಬ್ಲ್ಯುಎಸ್‌ಒ) ಸಂಸ್ಥೆಯು ಬ್ಯಾರೀಸ್ ಗ್ರೂಪ್ ಗೆ ʼಔಟ್ ಸ್ಟಾಂಡಿಗ್ ಪರ್ಫಾರ್ಮೆನ್ಸ್ ಇನ್ ಕನ್ಸ್ಟ್ರಕ್ಷನ್ ಒಎಚ್ಎಸ್ & ಇ ಎಕ್ಸಲೆನ್ಸ್ ಅವಾರ್ಡ್ʼ ( ನಿರ್ಮಾಣ ಕ್ಷೇತ್ರದಲ್ಲಿ ಶ್ರೇಷ್ಠ ನಿರ್ವಹಣೆ ಪ್ರಶಸ್ತಿ) ನೀಡಿ ಗೌರವಿಸಿದೆ.

ಹೈದರಾಬಾದ್‌ನಲ್ಲಿ ಬ್ಯಾರೀಸ್ ಗ್ರೂಪ್ ಅಭಿವೃದ್ಧಿಪಡಿಸುತ್ತಿರುವ “ಮೈಕ್ರೋಸಾಫ್ಟ್ ಡೇಟಾ ಸೆಂಟರ್-ಎಚ್‌ವೈಡಿ01” ಯೋಜನೆಗಾಗಿ ಈ ಪ್ರಶಸ್ತಿ ಸಂದಿದೆ. ಸೆಪ್ಟೆಂಬರ್ 27, 2024 ರಂದು ಚೆನ್ನೈನ ಫೆದರ್ಸ್ - ಎ ರಾಧಾ ಹೋಟೆಲ್‌ನಲ್ಲಿ ವರ್ಲ್ಡ್ ಸೇಫ್ಟಿ ಆರ್ಗನೈಷೇಶನ್ ಆಯೋಜಿಸಿದ್ದ OHS & E ಪ್ರೊಫೆಶನಲ್ ಡೆವೆಲಪ್ಮೆಂಟ್ ವಿಚಾರ ಸಂಕಿರಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

“ನಾವು ನಮ್ಮ 'ಸೇಫ್ಟಿ ಫಸ್ಟ್ - ಪ್ರಾಜೆಕ್ಟ್ ಬೆಸ್ಟ್' - 'ಕ್ವಾಲಿಟಿ ಫಸ್ಟ್ - ಪ್ರಾಜೆಕ್ಟ್ ಬೆಸ್ಟ್' ಎಂಬ ಧ್ಯೇಯದಂತೆ ನಡೆದಿದ್ದೇವೆ. ನಮ್ಮ ಎಲ್ಲಾ ಯೋಜನೆಗಳಲ್ಲಿ ಸುರಕ್ಷತೆ, ಆರೋಗ್ಯ ಮತ್ತು ಪರಿಸರ ಕಾಳಜಿಯನ್ನು ಉತ್ತೇಜಿಸಲು ನಾವು ಸಮರ್ಪಿತರಾಗಿದ್ದೇವೆ. ಇದು ಬ್ಯಾರಿಸ್‌ಗೆ ಹೆಮ್ಮೆಯ ಕ್ಷಣವಾಗಿದೆ. ನಮ್ಮ ಎಲ್ಲಾ ಯೋಜನೆಗಳಲ್ಲಿ ನಾವು ಸುರಕ್ಷತೆ ಮತ್ತು ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಮುತುವರ್ಜಿ ವಹಿಸುತ್ತೇವೆ” ಎಂದು ಬ್ಯಾರಿಸ್ ಗ್ರೂಪ್ ಸ್ಥಾಪಕಾಧ್ಯಕ್ಷ ಹಾಗು ಆಡಳಿತ ನಿರ್ದೇಶಕ ಸೈಯದ್ ಮುಹಮ್ಮದ್ ಬ್ಯಾರಿ ಪ್ರತಿಕ್ರಿಯಿಸಿದ್ದಾರೆ.












 


 


 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News