ಬ್ಯಾರೀಸ್ ಇನ್ನೋಮಾರ್ಕ್ ನಿಂದ ಭಾರತದ ಮೊದಲ ʼನೆಟ್-ಝೀರೋ ರಿಟೈಲ್ ಎಕ್ಸ್ಪೀರಿಯೆನ್ಸ್ ಸೆಂಟರ್ʼ ಆರಂಭ
ಬೆಂಗಳೂರು: ಬ್ಯಾರೀಸ್ ಇನ್ನೋಮಾರ್ಕ್ ನಿರ್ವಹಿಸುವ ಭಾರತದ ಮೊದಲ ನೆಟ್-ಝೀರೋ ರಿಟೈಲ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಗೊಂಡಿದೆ.
ಜಾಗತಿಕವಾಗಿ ಪ್ರಸಿದ್ಧವಾದ ಪೀಠೋಪಕರಣ ಬ್ರ್ಯಾಂಡ್ ಮಿಲ್ಲರ್ ನಾಲ್ ಮಳಿಗೆಯಾಗಿ ಇದು ಕಾರ್ಯ ನಿರ್ವಹಿಸಲಿದೆ. ಮಳಿಗೆಯ ವಾಸ್ತುಶಿಲ್ಪವನ್ನು ಸೌರ ಶಕ್ತಿ ಬಳಸಿ ಪರಿಸರ ಸ್ನೇಹಿಯಾಗಿ ನಿರ್ಮಾಣ ಮಾಡಲಾಗಿದೆ. ಇದು ಬ್ಯಾರೀಸ್ ನ ಪರಿಸರ ಸ್ನೇಹಿ ನಿರ್ಮಾಣ ಮತ್ತು ಜವಾಬ್ದಾರಿಯುತ ನಗರ ವಿನ್ಯಾಸದ ದೀರ್ಘಕಾಲದ ಬದ್ಧತೆಗೆ ಸಾಕ್ಷಿಯೆಂಬಂತಿದೆ.
ನೆಟ್-ಝೀರೋ ರಿಟೈಲ್ ಎಕ್ಸ್ಪೀರಿಯೆನ್ಸ್ ಸೆಂಟರ್ ನ ಉದ್ಘಾಟನಾ ಸಮಾರಂಭದಲ್ಲಿ ಉದ್ಯಮಿಗಳು, ಆರ್ಕಿಟೆಕ್ಟ್ ಗಳು, ಯೋಜನಾ ನಿರ್ವಹಣಾ ಸಲಹೆಗಾರರು ಮತ್ತು ಗ್ರಾಹಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಂತಿನಗರ ಶಾಸಕ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಅಧ್ಯಕ್ಷ ಎನ್ ಎ ಹ್ಯಾರಿಸ್ ನಲಪಾಡ್, APMEA ಮತ್ತು ಮಿಲ್ಲರ್ ನಾಲ್ ನ ಇಂಟರ್ನ್ಯಾಷನಲ್ ಕಾಂಟ್ರಾಕ್ಟ್ ನ ವ್ಯವಸ್ಥಾಪಕ ನಿರ್ದೇಶಕ ಕಾರ್ತಿಕ್ ಶೇಥಿಯಾ, ಬ್ಯಾರೀಸ್ ಗ್ರೂಪ್ ನ ಸ್ಥಾಪಕ ಮತ್ತು ಸಿಎಂಡಿ ಸೈಯದ್ ಮುಹಮ್ಮದ್ ಬ್ಯಾರಿ ಮತ್ತು ಬ್ಯಾರೀಸ್ ಗ್ರೂಪ್‌ನ ಬ್ಯುಸಿನೆಸ್ ಡೆವಲಪ್ಮೆಂಟ್ ಆಂಡ್ ರಿಟೇಲ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮಝರ್ ಬ್ಯಾರಿ ಉಪಸ್ಥಿತರಿದ್ದರು.
ದಶಕಗಳಿಂದ, ಬ್ಯಾರೀಸ್ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದೆ. ಮಿಲ್ಲರ್ ಕ್ನಾಲ್ ಎಕ್ಸ್ಪೀರಿಯೆನ್ಸ್ ಸೆಂಟರ್ ಅದೇ ರೀತಿಯ ವಿನ್ಯಾಸದಲ್ಲಿ ಮಾಡಲಾಗಿದೆ. ಮಳಿಗೆಯ ಅತ್ಯಾಧುನಿಕ ವಿನ್ಯಾಸವು ಪರಿಸರ ಸ್ನೇಹಿಯಾಗಿ ಹೇಗೆ ಮಾಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಸೌರಶಕ್ತಿ ಬಳಸಿರುವುದರಿಂದ ಈ ಸ್ಥಳವು ಕೇವಲ ನೆಟ್-ಝೀರೋ ರಿಟೈಲ್ ಎಕ್ಸ್ಪೀರಿಯೆನ್ಸ್ ಸೆಂಟರ್ ಗಿಂತಲೂ ಹಿರಿದಾಗಿದೆ. ಇದು ಜವಾಬ್ದಾರಿಯುತ ವಾಣಿಜ್ಯ ಅಭಿವೃದ್ಧಿಯ ಭವಿಷ್ಯಕ್ಕೆ ಒಂದು ಮಾದರಿಯಂತಿದೆ.
ಈ ಕಾರ್ಯಕ್ರಮವು ಹೊಸ ರಿಟೈಲ್ ಸೆಂಟರ್ ಅನಾವರಣಗೊಳಿಸುವುದರ ಬಗ್ಗೆ ಮಾತ್ರವಲ್ಲ, ಪರಿಸರ ಸ್ನೇಹಿ ಸಾಮೂಹಿಕ ದೃಷ್ಟಿಕೋನವನ್ನು ಬೆಳೆಸುವ ಬಗ್ಗೆಯೂ ಇತ್ತು. ತನ್ನ ನಿರ್ಮಾಣಗಳಲ್ಲಿ ಪರಿಸರ ಸ್ನೇಹಿ ವಿನ್ಯಾಸವನ್ನು ಅಳವಡಿಸಿಕೊಳ್ಳುವ ಮೂಲಕ ಬ್ಯಾರೀಸ್ ವಿಶಿಷ್ಟ ಪರಂಪರೆಯನ್ನು ಹುಟ್ಟುಹಾಕಿದೆ ಎಂದು ಪ್ರಕಟಣೆ ತಿಳಿಸಿದೆ.