×
Ad

ಬೆಳಗಾವಿ: ರುಂಡ ಬೇರ್ಪಟ್ಟ ಸ್ಥತಿಯಲ್ಲಿ ಯುವಕನ ಮೃತದೇಹ ಪತ್ತೆ!

Update: 2023-08-18 20:55 IST

ಅಕ್ಬರ್ ಶಬ್ಬೀರ್ ಜಮಾದಾರ‌ - ಮೃತ ಯುವಕ (ಒಳ ಚಿತ್ರದಲ್ಲಿ)

ಬೆಳಗಾವಿ: ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದ ಅರಣ್ಯದಲ್ಲಿ ಶುಕ್ರವಾರ ಮಧ್ಯಾಹ್ನ ರುಂಡ ಬೇರ್ಪಟ್ಟ ಸ್ಥತಿಯಲ್ಲಿ ಮೃತದೇಹ ಪತ್ತೆಯಾಗಿರುವುದು ವರದಿಯಾಗಿದೆ. 

ಹರಿತವಾದ ಆಯುಧದಿಂದ ರುಂಡ ಕತ್ತರಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದು, ಕೊಲೆಗೀಡಾದ ಯುವಕನನ್ನು ಹಾರೂಗೇರಿಯ ನಿವಾಸಿ ಅಕ್ಬರ್ ಶಬ್ಬೀರ ಜಮಾದಾರ (21) ಎಂದು ಗುರುತಿಸಲಾಗಿದೆ. 

ಘಟನೆಗೆ ಸಂಬಂಧಿಸಿ ಮಹಾಂತೇಶ ಸೋಮಲಿಂಗ (24) ಎಂಬ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

ಅರಣ್ಯದ ಕಡೆಗೆ ಹೋಗಿದ್ದ ಜನರಿಗೆ ಮೃತದೇಹ ಕಾಣಿಸಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News