×
Ad

ನಾಪತ್ತೆಯಾಗಿದ್ದ ಪಿರಿಯಾಪಟ್ಟಣ ಬೆಟ್ಟದಪುರದ ಮಹಿಳೆಯ ವಸ್ತುಗಳು ಅಬ್ಬಿಫಾಲ್ಸ್ ಬಳಿ ಪತ್ತೆ: ತೀವ್ರ ಶೋಧ

Update: 2023-09-08 21:53 IST

ಮಡಿಕೇರಿ ಸೆ.8 : ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ಉಡುಪು ಮತ್ತಿತರ ವಸ್ತುಗಳು ಮಡಿಕೇರಿಯ ಪ್ರವಾಸಿತಾಣ ಅಬ್ಬಿಫಾಲ್ಸ್ ಬಳಿ ಪತ್ತೆಯಾದ ಹಿನ್ನೆಲೆ ಆಕೆಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.

ಬೆಟದ್ಟದಪುರದ ಬಾರಸೆ ಗ್ರಾಮದ ನಿವಾಸಿ ಸರಸ್ವತಿ(33) ಎಂಬುವವರು ನಾಪತ್ತೆಯಾಗಿರುವ ಬಗ್ಗೆ ಅಲ್ಲಿನ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆಕೆಯ ಪಾದರಕ್ಷೆ, ಪರ್ಸ್, ಬಟ್ಟೆಗಳು ಅಬ್ಬಿಫಾಲ್ಸ್ ಬಳಿ ಪತ್ತೆಯಾಗಿದೆ.

ಈ ಹಿನ್ನೆಲೆ ಮಡಿಕೇರಿ ನಗರಠಾಣಾ ಪೊಲೀಸರು, ಎನ್‍ಡಿಆರ್‍ಫ್ ಮತ್ತು ಬೆಟ್ಟದಪುರ ಪೊಲೀಸರು ನಾಪತ್ತೆಯಾದ ಮಹಿಳೆಗಾಗಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News