2ನೇ ದಿನಕ್ಕೆ ಕಾಲಿಟ್ಟ ಬಿಡದಿ ಟೌನ್​ಶಿಪ್ ವಿರುದ್ಧದ ಜೆಡಿಎಸ್ ಪಾದಯಾತ್ರೆ

Update: 2026-08-10 13:38 IST

ಬೆಂಗಳೂರು : ಬಿಡದಿ ಟೌನ್‍ಶಿಪ್ ಯೋಜನೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ 2ನೇ ದಿನದ ಪಾದಯಾತ್ರೆಯನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ  ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಆರಂಭಿಸಲಾಗಿದೆ. ಬಿಡದಿಯ ಬಿಜಿಎಸ್ ಸರ್ಕಲ್ ನಿಂದ ಆರಂಭವಾದ ಬಿಡದಿ ಪಾದಯಾತ್ರೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅವರು ಚಾಲನೆ ನೀಡಿದರು.

ಇದೇ ವೇಳೆ ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ ಎಸ್ ಪುಟ್ಟರಾಜು, ಶಾಸಕರಾದ ಬಾಲಕೃಷ್ಣ,ಜಿ ಡಿ ಹರೀಶ್ ಗೌಡ, ಶರಣ್ ಗೌಡ ಕಂದಕೂರ್ , ಸ್ವರೂಪ್ ಪ್ರಕಾಶ್, ಸುರೇಶ್ ಬಾಬು, ಶಿಡ್ಲಘಟ್ಟ ಶಾಸಕರಾದ ರವಿಕುಮಾರ್, ಮಾಜಿ ಶಾಸಕರಾದ ಎ ಮಂಜು, ಡಾ. ಅನ್ನದಾನಿ, ನಿಸರ್ಗ ನಾರಾಯಣಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷರಾದ ಜೆಕೆ ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಭೋಜೆಗೌಡ, ಸೂರಜ್ ಸೋನಿ ನಾಯಕ್, ಮೈಸೂರು ಜಿಲ್ಲಾಧ್ಯಕ್ಷರಾದ ಅಶ್ವಿನ್ ಕುಮಾರ್, ಸುಧಾಕರ್ ಶೆಟ್ಟಿ, ಜಯಮುತ್ತು, ರಶ್ಮಿರಾಮೇಗೌಡ ಅವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News