×
Ad

ಕಾಂಗ್ರೆಸ್ ನ ಗೊಡ್ಡು ಬೆದರಿಕೆಗಳಿಗೆ ಬಿಜೆಪಿ ಹೆದರುವುದಿಲ್ಲ: ಬಿ.ವೈ.ವಿಜಯೇಂದ್ರ

Update: 2023-07-04 15:42 IST

ಕಾಂಗ್ರೆಸ್ ಸರ್ಕಾರ ಬಂದು 50 ದಿನಗಳಾಗಿದ್ರೂ ಭರವಸೆ ಈಡೇರಿಸಿಲ್ಲ. ಕೇವಲ ಸಮಯ ದೂಡುತ್ತಿದೆ ಎಂದು ಮಾಜಿ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ 5 ಗ್ಯಾರೆಂಟಿ ಘೋಷಣೆ ಮಾಡಿದ್ದ ಕಾಂಗ್ರೆಸ್, ಮೊದಲ ದಿನವೇ ಗ್ಯಾರೆಂಟಿ ಅನುಷ್ಠಾನ ಮಾಡ್ತೀವಿ ಎಂದು ಭರವಸೆ ನೀಡಿತ್ತು. ಆದ್ದರಿಂದ ಕೊಟ್ಟ ಭರವಸೆ ತಕ್ಷಣ ಈಡೇರಿಸಬೇಕಾಗಿದೆ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ಭರವಸೆ ಈಡೇರಿಸಲು ಆಗದೆ ಬಿಜೆಪಿ ಸರ್ಕಾರದ ಬಗ್ಗೆ ತನಿಖೆ ಮಾಡುವುದಾಗಿ ಗೊಡ್ಡು ಬೆದರಿಕೆ ಹಾಕುತ್ತಿದೆ. ಬಿಜೆಪಿ ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ಯಾವುದೇ ತನಿಖೆ ಮಾಡಿದರೂ ಬಿಜೆಪಿ ಸಿದ್ದವಿದೆ. ಸರ್ಕಾರ ಬಾಯಿಮುಚ್ಚುವ ಕೆಲಸ ಮಾಡುತ್ತಿದೆ. ಆದರೆ ಬಿಜೆಪಿ ತನ್ನ ಹೋರಾಟ ಮುಂದುವರೆಸಲಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News