×
Ad

ಚಿಲ್ಲರೆ ಕೊರತೆ ನೆಪದಲ್ಲಿ ಪ್ರಯಾಣಕ್ಕೆ ಅವಕಾಶ ನಿರಾಕರಿಸಬೇಡಿ : ಬಿಎಂಟಿಸಿ

Update: 2026-07-13 21:02 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಚಿಲ್ಲರೆಯ ಕೊರತೆ ಕಾರಣಕ್ಕಾಗಿ ಯಾವುದೇ ಪ್ರಯಾಣಿಕರ ಪ್ರಯಾಣದ ಅವಕಾಶವನ್ನು ನಿರಾಕರಿಸುವಂತಿಲ್ಲ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು(ಬಿಎಂಟಿಸಿ) ಸೋಮವಾರ ಆದೇಶ ಹೊರಡಿಸಿದೆ.

ಇತ್ತೀಚೆಗೆ ಸಾರಿಗೆ ಸಚಿವ ಭೈರತಿ ಸುರೇಶ್, ಮಾಸ್ಕ್ ಧರಿಸಿ ನಗರದ 10ಕ್ಕೂ ಹೆಚ್ಚು ಮಾರ್ಗಗಳ ಬಿಎಂಟಿಸಿ ಬಸ್‍ನಲ್ಲಿ ಸಾಮಾನ್ಯ ಪ್ರಯಾಣಿಕನಂತೆ ಪ್ರಯಾಣಿಸಿ, ರಿಯಾಲಿಟಿ ಚೆಕ್ ನಡೆಸಿದ್ದರು. ಈ ವೇಳೆ ನಿರ್ವಾಹಕರೊಬ್ಬರು ಸರಿಯಾದ ಚಿಲ್ಲರೆ ಇಲ್ಲ ಎಂಬ ಕಾರಣಕ್ಕಾಗಿ ಸಚಿವರನ್ನೇ ಬಸ್ಸಿನಿಂದ ಕೆಳಗಿಳಿಸಿದ್ದು ಸುದ್ದಿಯಾಗಿತ್ತು.

ಹೊಸ ಮಾರ್ಗಸೂಚಿ ಅನ್ವಯ, ಬಿಎಂಟಿಸಿ ಚಾಲಕರು ಬಸ್‍ಗಳನ್ನು ನಿಗದಿತ ಬಸ್ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸಬೇಕು. ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರ ಜೊತೆಗೆ ಸೌಜನ್ಯದಿಂದ ಮತ್ತು ಗೌರವದಿಂದ ವರ್ತಿಸಬೇಕು ಎಂದು ಸೂಚಿಸಲಾಗಿದೆ.

ನಿರ್ವಾಹಕರು ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳಲ್ಲಿ (ಇಟಿಎಂ) ಲಭ್ಯವಿರುವ ಡೈನಾಮಿಕ್ ಕ್ಯೂಆರ್ ಕೋಡ್ ಆಧರಿತ ಯುಪಿಐ ಪಾವತಿ ಸೌಲಭ್ಯವನ್ನು ಬಳಸಲು ಪ್ರಯಾಣಿಕರನ್ನು ಉತ್ತೇಜಿಸಬೇಕು. ಚಿಲ್ಲರೆ ಕೊರತೆಯಿಂದ ಪ್ರಯಾಣಿಕರಿಗೆ ಪ್ರಯಾಣ ನಿರಾಕರಿಸಬಾರದು ಅಥವಾ ಬಸ್‍ನಿಂದ ಮಾರ್ಗಮಧ್ಯೆ ಇಳಿಯುವಂತೆ ಒತ್ತಾಯಿಸಬಾರದು ಎಂದು ಬಿಎಂಟಿಸಿ ತಿಳಿಸಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News