×
Ad

ಸಿಎಂ ಮಾಧ್ಯಮ ಕಾರ್ಯದರ್ಶಿ-3 ರಾಘವೇಂದ್ರ ಭಟ್ ನೇಮಕಾತಿ ಅಮಾನತು: ಸರಕಾರ ಆದೇಶ

Update: 2026-07-13 19:59 IST

ರಾಘವೇಂದ್ರ ಭಟ್

ಬೆಂಗಳೂರು : ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ-3 ಹುದ್ದೆಗೆ ನೇಮಕಗೊಂಡಿದ್ದ ರಾಘವೇಂದ್ರ ಭಟ್ ಅವರ ನೇಮಕಾತಿ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನಲ್ಲಿರಿಸಿ (ನಿಲಂಬನೆ) ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ನೂತನ ಅಧಿಸೂಚನೆಯಲ್ಲಿ ಈ ನೇಮಕಾತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲಂಬನೆಯಲ್ಲಿರಿಸಲು ಆದೇಶಿಸಲಾಗಿದೆ.

ರಾಜ್ಯ ಸರಕಾರವು ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಮೂವರು ಮಾಧ್ಯಮ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಜುಲೈ 8ರಂದು ಆದೇಶ ಹೊರಡಿಸಿತ್ತು. ಪಿ. ತ್ಯಾಗರಾಜ್‌ (ಮಾಧ್ಯಮ ಕಾರ್ಯದರ್ಶಿ-1), ಆರ್‌ ಜಯಪ್ರಕಾಶ್‌ (2ನೇ ಕಾರ್ಯದರ್ಶಿ) ಮತ್ತು ರಾಘವೇಂದ್ರ ಭಟ್‌ ಅವರನ್ನು 3ನೇ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಈ ಪೈಕಿ ರಾಘವೇಂದ್ರ ಭಟ್‌ ಅವರ ನೇಮಕ ತೀವ್ರ ಚರ್ಚೆಗೆ ಮತ್ತು ವಿರೋಧಾಭಾಸಕ್ಕೆ ಕಾರಣವಾಗಿತ್ತು.

ರಾಘವೇಂದ್ರ ಭಟ್‌ ಅವರು 2021ರಲ್ಲಿ ತಮ್ಮ ಫೇಸ್‌ಬುಕ್ ಪುಟದಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎನ್ನಲಾದ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಈ ಬೆನ್ನಲ್ಲೆ ಸರಕಾರ ಅವರ ನೇಮಕಾತಿ ನಿಲಂಬನೆಯಲ್ಲಿರಿಸಿ ಆದೇಶ ಹೊರಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News