ಕೃಷಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ; ಸೆ.30 ಕೊನೆಯ ದಿನ
ಬೆಂಗಳೂರು, ಸೆ.13: ಕೃಷಿ ವಿವಿ ಹಳೆ ವಿದ್ಯಾರ್ಥಿಗಳ ಸಂಘ ಅಲುಮ್ನಿ ಅಸೋಸಿಯೇಷನ್ ವತಿಯಿಂದ ಏಳು ಕೃಷಿ ಸಂಬಂಧಿ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಸೆ.30ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕರ್ನಾಟಕ ಬ್ಯಾಂಕ್ ಉತ್ತಮ ಬ್ಯಾಂಕಿಂಗ್ ಕೃಷಿಕ ಪ್ರಶಸ್ತಿ, ಎಸ್.ಎಂ.ನಾರಾಯಣರೆಡ್ಡಿ ಅತ್ಯುತ್ತಮ ಕೃಷಿ ವಿಜ್ಞಾನ ಪದವೀಧÀರ ರೈತ ಪ್ರಶಸ್ತಿ, ಗಿರಿಯಪ್ಪ ಗೌಡ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ, ಡಾ.ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ, ಡಾ.ಬಿ.ಕೆ.ಕುಮಾರಸ್ವಾಮಿ ‘ಪ್ರಸಿದ್ದಿ’ ಪ್ರಶಸ್ತಿ, ಸಕಲವಾರ ರಾಮಯ್ಯ ರೆಡ್ಡಿ ದತ್ತಿ ಅತ್ಯುತ್ತಮ ರೈತ ಪ್ರಶಸ್ತಿ ಮತ್ತು ಅಲುಮ್ನಿ ಅಸೋಸಿಯೇಷನ್ ಕೃಷಿ ಮಾಧ್ಯಮ ಮಿತ್ರ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಹೆಚ್ಚಿನ ಮಾಹಿತಿಗೆ ಹಳೆ ವಿದ್ಯಾರ್ಥಿಗಳ ಸಂಘ(ರಿ), ಕೃಷಿ ವಿಶ್ವ ವಿದ್ಯಾನಿಲಯ, ಬೆಂಗಳೂರು-560024ಗೆ ಅಥವಾ ದೂ.ಸಂಖ್ಯೆ 080-2341 0754, ಅಥವಾ alumniuasb83@gmail.com ಅಥವಾ www.alumniuasb.in ಜಾಲತಾಣಕ್ಕೆ ಸಂಪರ್ಕಿಸಿ ಎಂದು ಪ್ರಕಟನೆ ತಿಳಿಸಿದೆ.