ಕಾವೇರಿ ವಿವಾದ: ತಮಿಳು ನಟ ಸಿದ್ದಾರ್ಥ್ ಸಿನೆಮಾ ಪ್ರಚಾರಕ್ಕೆ ಅಡ್ಡಿಪಡಿಸಿದ ಕರವೇ ಸ್ವಾಭಿಮಾನಿ ಸೇನೆ
Update: 2023-09-28 20:53 IST
ಬೆಂಗಳೂರು, ಸೆ.28: ಕಾವೇರಿ ನೀರು ಹಂಚಿಕೆ ವಿವಾದ ತಮಿಳು ಸಿನಿಮಾ ನಟನಿಗೂ ತಟ್ಟಿದ್ದು, ಇಲ್ಲಿನ ಮಲ್ಲೇಶ್ವರದ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ತಮ್ಮ ‘ಚಿತ್ತ’ (Chithha) ಸಿನೆಮಾದ ಕುರಿತು ಗುರುವಾರ ಸುದ್ದಿಗೋಷ್ಠಿ ನಡೆಸುತ್ತಿದ್ದ ನಟ ಸಿದ್ದಾರ್ಥ್ ಗೆ ʼಕನ್ನಡ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆʼ ಕಾರ್ಯಕರ್ತರು ಅಡ್ಡಿಪಡಿಸಿರುವ ಘಟನೆ ನಡೆದಿದೆ.
ಸೆ.28ರಂದು ಬಿಡುಗಡೆಗೊಂಡ ತಮ್ಮ ‘ಚಿತ್ತ’ ಸಿನಿಮಾದ ಕುರಿತು ನಟ ಸಿದ್ದಾರ್ಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವಾಗ ಮಧ್ಯ ಪ್ರವೇಶಿಸಿದ ಕರವೇ ಕಾರ್ಯಕರ್ತರು, ‘ತಮಿಳುನಾಡಿಗೂ ಕರ್ನಾಟಕಕ್ಕೂ ಕಾವೇರಿ ಕಿಚ್ಚು ಹತ್ತಿರುವ ಈ ಸಮಯದಲ್ಲಿ ತಮಿಳು ಚಿತ್ರದ ಪ್ರಚಾರದ ಅವಶ್ಯಕತೆ ಇಲ್ಲ. ಎಲ್ಲರೂ ಕಾವೇರಿ ಹೋರಾಟಕ್ಕೆ ಬೆಂಬಲ ಕೊಡಿ. ಈ ಸುದ್ದಿಗೋಷ್ಠಿಗೆ ನಮ್ಮ ಸಂಪೂರ್ಣ ವಿರೋಧವಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ನಟ ಸಿದ್ದಾರ್ಥ್ ಅರ್ಧಕ್ಕೆ ಮಾತು ನಿಲ್ಲಿಸಿ ವೇದಿಕೆಯಿಂದ ಹೊರನಡೆದು ಕಾರಿನಲ್ಲಿ ತೆರಳಿದ್ದಾರೆ.