KPSC ಅಧಿಕೃತ ವೆಬ್‌ಸೈಟ್ ವಿಳಾಸ ಬದಲಾವಣೆ
ಬೆಂಗಳೂರು, ಅ. 19: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ವು ತನ್ನ ವೆಬ್‌ಸೈಟ್ ವಿಳಾಸವನ್ನು ಆಡಳಿತಾತ್ಮಕ ಕಾರಣಗಳಿಂದ ಹಳೆಯ ವೆಬ್‌ಸೈಟ್ ವಿಳಾಸ https://Kpsc.Kar.Nic.in ನ್ನು ಬದಲಾಯಿಸಿ, https://Kpsc.Karnataka.gov.in ಎಂಬ ಹೊಸ ವಿಳಾಸವನ್ನು ಆರಂಭಿಸಿದೆ.
ಸಾರ್ವಜನಿಕರು ಹಾಗೂ ಉದ್ಯೋಗಾಕಾಂಕ್ಷಿಗಳ ಇನ್ನು ಮುಂದೆ ಕೆಪಿಎಸ್ಸಿಗೆ ಸಂಬಂಧಿಸಿದ ಮಾಹಿತಿಯನ್ನು ಈ ಹೊಸ ವೆಬ್‌ಸೈಟ್ ಅನ್ನು ಸಂಪರ್ಕಿಸಬೇಕಾಗಿ ಆಯೋಗದ ಅಧಿಕೃತ ಪ್ರಕಟಣೆ ತಿಳಿಸಿದೆ.
ಆಯೋಗದ ನೂತನ ವೆಬ್‌ಸೈಟ್ ಈಗಾಗಲೇ ಅಧಿಕೃತವಾಗಿ ಚಾಲ್ತಿಗೆ ಬಂದಿದ್ದು, ಇನ್ನು ಮುಂದೆ ಆಯೋಗಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ, ನೇಮಕಾತಿ ಅಧಿಸೂಚನೆಗಳು ಹಾಗೂ ವಿವರಗಳನ್ನು ನೂತನ ವೆಬ್‌ಸೈಟ್ https://Kpsc.Karnataka.gov.in ಮೂಲಕವೇ ಪಡೆಯಬೇಕೆಂದು ಆಯೋಗ ಕಾರ್ಯದರ್ಶಿ ಕೆ.ಜ್ಯೋತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.