×
Ad

ಮೋಸಗಾರ ಮೋದಿಯನ್ನು ಕನ್ನಡಿಗರು ತಿರಸ್ಕರಿಸಿಯಾಗಿದೆ: ಕಾಂಗ್ರೆಸ್

Update: 2024-03-18 13:15 IST

 ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ಅವರ ವಿರುದ್ಧ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌, ನರೇಂದ್ರ ಮೋದಿ ಅವರೇ, ವಿಧಾನಸಭಾ ಚುನಾವಣೆಗೆ ಬಂದು ಹೋದ ನಂತರ ಮತ್ತೆ ಕರ್ನಾಟಕದ ಕಡೆ ಮುಖ ಮಾಡಲಿಲ್ಲ. ಬರದಿಂದ ನಲುಗಿದ ಕನ್ನಡಿಗರು ಮೋದಿಗಾಗಿ "ಇನ್ನೂ ಯಾಕ ಬರಲಿಲ್ಲಾವ ದೆಹಲಿಯಾವ ವಾರದಾಗ ಮೂರು ಸರ್ತಿ ಬಂದು ಹೋಗಾವ" ಎಂಬ ಹಾಡನ್ನು ಹಾಡುತ್ತಿದ್ದರು ಎಂದು ಟೀಕಿಸಿದೆ.

ಕರ್ನಾಟಕದ ಹಿತ ಮರೆತು ಮತಕ್ಕಾಗಿ ಮಾತ್ರ ಬರುವ ಮೋಸಗಾರ ಮೋದಿಯನ್ನು ಕನ್ನಡಿಗರು ಈಗಾಗಲೇ ತಿರಸ್ಕರಿಸಿಯಾಗಿದೆ. ಬರ ಎದುರಿಸುತ್ತಿರುವ ಕರ್ನಾಟಕಕ್ಕೆ ದ್ರೋಹದ ಬರಸಿಡಿಲಾಗಿ ಬರುತ್ತಿರುವ ತಾವು ಯಾವ ನೈತಿಕತೆಯಲ್ಲಿ ಕನ್ನಡಿಗರ ಮತ ಕೇಳುತ್ತೀರಿ? ಎಂದು ಪ್ರಶ್ನಿಸಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News