×
Ad

ಕೆಇಎ ಪ್ರಕರಣದಲ್ಲಿ ಕರ್ತವ್ಯಲೋಪ: ಸಿಪಿಐ ಅಮಾನತು

Update: 2023-11-22 15:38 IST

ಅಮಾನತು ಗೊಂಡ ಅಧಿಕಾರಿ

ಕಲಬುರಗಿ: ಆರೋಪಿ ಆರ್.ಡಿ ಪಾಟೀಲ್ ಬಂಧನ ಕುರಿತಂತೆ ಕಲಬುರಗಿ ಐಜಿಪಿ ಅಜಯ್  ಹಿಲೋರಿ ಅವರು ಅಫಜಲಪುರ ಸಿಪಿಐ ಪಂಡಿತ ಸಗರ ಅಮಾನತುಗೊಳಿಸಿಬುಧವಾರ ಆದೇಶ ಹೊರಡಿಸಿದ್ದಾರೆ.

ಅಫಜಲಪುರ ಸಿಪಿಐ ಪಂಡಿತ ಸಗರ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ. ಕೆಇಎ ಪ್ರಕರಣದ ಪ್ರಮುಖ ಆರೋಪಿ ನವೆಂಬರ್ 7 ರಂದು ಕಲಬುರಗಿ ನಗರದ ಖಾಸಗಿ ಅಪಾರ್ಟ್ಮೆಂಟ್  ನಲ್ಲಿ ಇದ್ದ ಮಾಹಿತಿ ಇದ್ದರೂ ಕೂಡ ಪಂಡಿತ ಸಗರ ಅವರು ಸ್ಥಳಕ್ಕೆ  ತಡವಾಗಿ ಹೋದ ಕಾರಣ ಆರ್.ಡಿ ಪಾಟೀಲ್ ತಪ್ಪಿಸಿಕೊಂಡು ಹೋಗಿರುತ್ತಾನೆ ಎಂದು ಕರ್ತವ್ಯಲೋಪ ಎಸಗಿದ ಹಿನ್ನೆಲೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.

ಕೆಇಎ ಪರೀಕ್ಷೆಯಲ್ಲಿ ನಡೆದಿರುವ ಆಕ್ರಮಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News