×
Ad

ಕಾಂಗ್ರೆಸ್ ಕಚೇರಿ ನಿರ್ಮಾಣದಲ್ಲಿ ಭಾಗಿಯಾಗದವರ ಮಾಹಿತಿ ಕಲೆಹಾಕಲು ಸೂಚನೆ: ಡಿ.ಕೆ. ಶಿವಕುಮಾರ್

Update: 2026-01-27 22:11 IST

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (Photo: X)

ಬೆಂಗಳೂರು: ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣ ವಿಚಾರದಲ್ಲಿ ಆಸಕ್ತಿ ತೋರಿರುವ ಹಾಗೂ ತೋರದವರ ಬಗ್ಗೆ ಲಿಖಿತ ರೂಪದಲ್ಲಿ ಮಾಹಿತಿ ಕಲೆಹಾಕಲು ಎಐಸಿಸಿ ನಾಯಕರು ಸೂಚನೆ ನೀಡಿದ್ದು, ಎರಡು ದಿನಗಳಲ್ಲಿ ಮಾಹಿತಿ ನೀಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಭವನ್ ಟ್ರಸ್ಟ್ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಕಾಂಗ್ರೆಸ್ ಭವನದ ಟ್ರಸ್ಟಿಗಳಾಗಿದ್ದು, ಎಐಸಿಸಿ ಖಜಾಂಜಿಗಳು ಈ ಸಭೆಗೆ ಬಂದಿದ್ದರು. ಯಾವ ತಾಲೂಕಿನಲ್ಲಿ ಕಚೇರಿ ಆಗಿದೆ, ಯಾವ ತಾಲೂಕಿನಲ್ಲಿ ಪ್ರಕ್ರಿಯೆ ನಡೆದಿಲ್ಲ. ಯಾರು ಇದರಲ್ಲಿ ಆಸಕ್ತಿ ವಹಿಸಿದ್ದಾರೆ, ಯಾರು ಆಸಕ್ತಿ ವಹಿಸಿಲ್ಲ ಎಲ್ಲವನ್ನು ವಿಮರ್ಶೆ ಮಾಡಿದ್ದಾರೆ ಎಂದರು.

ಎಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಎಲ್ಲಿ ನಿರ್ಮಿಸಿಲ್ಲ ಎಂಬ ಮಾಹಿತಿ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿರುವ ಪಕ್ಷದ ಆಸ್ತಿಗಳು, ದಾಖಲೆಗಳು, ತೆರಿಗೆ ಪಾವತಿ ಸೇರಿದಂತೆ ಅನೇಕ ಅಂಶಗಳ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ನೂತನ ಕಚೇರಿ ನಿರ್ಮಾಣ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ಮಾಹಿತಿ ಪಡೆದರು ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News