×
Ad

ಪಾಕ್ ವಿರುದ್ಧ ಕದನ ವಿರಾಮ ಘೋಷಣೆ ವಿಚಾರದಲ್ಲಿ ಮೋದಿಯವರ ನಿಲುವಿನ ಬಗ್ಗೆ ಸಂಶಯಗಳಿವೆ: ದಿನೇಶ್‌ ಗುಂಡೂರಾವ್

Update: 2025-06-19 12:39 IST

ಬೆಂಗಳೂರು: ಕದನ ವಿರಾಮ ವಿಚಾರದಲ್ಲಿ ಅಮೆರಿಕದ ಪಾತ್ರವೇನಿತ್ತು ಎಂದು ಪ್ರಧಾನಿ ಮೋದಿ  ದೇಶದ ಜನರಿಗೆ ತಿಳಿಸಬೇಕು. ಈ ಧೈರ್ಯ ‌ಮೋದಿಯವರಿಗೆ‌ ಇದೆಯೇ.? ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದ್ದಾರೆ.

ತನ್ನ ಮಧ್ಯಸ್ಥಿಕೆಯಲ್ಲೇ ಕದನ ವಿರಾಮ ಏರ್ಪಟಿತ್ತು ಎಂದು ಅಮೆರಿಕ ಅಧ್ಯಕ್ಷ ಟ್ಂಪ್ ಪುನರುಚ್ಚರಿಸಿರುವ ಬಗ್ಗೆ  ಸಾಮಾಜಿಕ ಜಾಲತಾಣ Xನಲ್ಲಿ ‌ಪ್ರತಿಕ್ರಿಯಿಸಿರುವ ಸಚಿವರು, ಪಾಕಿಸ್ತಾನದ ವಿರುದ್ಧ ಕದನ ವಿರಾಮ ಘೋಷಿಸಿದ ವಿಚಾರದಲ್ಲಿ ಮೋದಿಯವರ ನಿಲುವಿನ ಬಗ್ಗೆ ಅನೇಕ ಸಂಶಯಗಳಿವೆ. ಹಾಗಾಗಿ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಪ್ರಧಾನಿಯವರು ತಮ್ಮ ‌ನಿಲುವನ್ನು‌ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

‌ಪ್ರಧಾನಿ‌ ಮೋದಿ, ಟ್ರಂಪ್ ಜೊತೆಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರಂತೆ. ಈ ವೇಳೆ ಭಾರತ ಯಾರ ಮಧ್ಯಸ್ಥಿಕೆಯನ್ನು ಒಪ್ಪಲ್ಲ ಎಂದು ಮೋದಿ ಟ್ರಂಪ್ ಅವರಿಗೆ ಕಡ್ಡಿ ಮುರಿದಂತೆ ಹೇಳಿದ್ದಾರಂತೆ. ಹೀಗಂತ ಹೇಳಿರುವುದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ. ಆದರೆ ವಿಕ್ರಮ್ ಮಿಸ್ರಿ ಹೇಳಿಕೆಯನ್ನು ಯಾವ ಆಧಾರದಲ್ಲಿ ನಂಬುವುದು.? ಯಾಕೆಂದರೆ ಮಿಸ್ರಿ ಈ ಹೇಳಿಕೆ ಕೊಟ್ಟ ಬೆನ್ನಲ್ಲೇ ಟ್ರಂಪ್ ನನ್ನ ಮಧ್ಯಸ್ಥಿಕೆಯಲ್ಲೇ ಕದನ ವಿರಾಮ ಏರ್ಪಟಿತ್ತು ಎಂದು ಪುನರುಚ್ಚರಿಸಿದ್ದಾರೆ. ಜೊತೆಗೆ ಪೆಹಲ್ಗಾಮ್ ಉಗ್ರ ಕೃತ್ಯದ ರೂವಾರಿ ಹಾಗೂ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್‌ಗೆ ಔತಣಕೂಟ ಏರ್ಪಡಿಸಿದ್ದಾರೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News