×
Ad

17 ನದಿ ನೀರಿನ ಗುಣಮಟ್ಟ ಮಾಪನ ಕೇಂದ್ರ, 2 ಪರಿಸರ ಪ್ರಯೋಗಾಲಯಗಳ ಸ್ಥಾಪನೆ

Update: 2024-02-16 19:59 IST

ಬೆಂಗಳೂರು: ರಾಜ್ಯದಲ್ಲಿ 17 ನದಿ ನೀರಿನ ಗುಣಮಟ್ಟ ಮಾಪನ ಕೇಂದ್ರಗಳು ಹಾಗೂ ಎರಡು ಪರಿಸರ ಪ್ರಯೋಗಾಲಯಗಳ ಸ್ಥಾಪನೆ ಮಾಡಲಾಗುವುದು. ಅಲ್ಲದೇ 9 ಪರಿಸರ ಪ್ರಯೋಗಾಲಯಗಳನ್ನು ಉನ್ನತೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಶುಕ್ರವಾರ ನಗರದ ವಿಧಾನಸೌಧದಲ್ಲಿ ಬಜೆಟ್ ಮಂಡಿಸಿದ ಅವರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯವಿಧಾನವನ್ನು ಬಲಪಡಿಸುವ ನಿಟ್ಟಿನಲ್ಲಿ ವಿವಿಧ ಅನುಮತಿಗಳು ಮತ್ತು ಪ್ರಮಾಣ ಪತ್ರಗಳನ್ನು ನೀಡಲು ಏಕಗವಾಕ್ಷಿ ಕಾರ್ಯವಿಧಾನವನ್ನು ಸೃಜಿಸಲಾಗುವುದು ಎಂದು ಹೇಳಿದ್ದಾರೆ.

► ಪ್ರಸಕ್ತ ವರ್ಷ ಬಂಡೀಪುರದಲ್ಲಿ ಒಂದು ಹೊಸ ಆನೆ ಕಾರ್ಯಪಡೆ ರಚನೆ ಹಾಗೂ ರಾಜ್ಯದಲ್ಲಿರುವ ಎಲ್ಲ ಆನೆ ಕಾರ್ಯಪಡೆಗಳಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಬಲಪಡಿಸಲು 10 ಕೋಟಿ ರೂ. ಹಂಚಿಕೆ.

ರೈಲ್ವೆ ಬ್ಯಾರಿಕೇಡ್‍ಗಳನ್ನು ನಿರ್ಮಿಸಲು ಪ್ರಾಮುಖ್ಯತೆ.

► ಬೀದರ್ ಜಿಲ್ಲೆಯ ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರೆ ಜೀವವೈವಿಧ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾರ್ಯಕ್ರಮಗಳಿಗೆ 15 ಕೋಟಿ ರೂ. ಅನುದಾನ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News