ಪ್ಯಾಕೇಜ್ಡ್ ಕುಡಿಯುವ ನೀರು, ರಸ್ಕ್, ಚಿಕನ್ ಕಬಾಬ್ ಮಾದರಿಗಳು ಅಸುರಕ್ಷಿತ : ಆಹಾರ ಸುರಕ್ಷತೆ ಇಲಾಖೆ
ಸಾಂದರ್ಭಿಕ ಚಿತ್ರ | PC : Meta AI
ಬೆಂಗಳೂರು : ಪ್ಯಾಕೇಜ್ಡ್ ಕುಡಿಯುವ ನೀರು, ರಸ್ಕ್, ಚಿಕನ್ ಕಬಾಬ್, ಬೆಲ್ಲದ ಅಚ್ಚು ಸೇರಿ 17 ಪದಾರ್ಥಗಳ ಮಾದರಿಗಳು ಅಸುರಕ್ಷಿತ ಹಾಗೂ ಉಪ್ಪು, ತುಪ್ಪ, ಮೆಣಸಿನ ಪುಡಿ ಸೇರಿ 18 ಪದಾರ್ಥಗಳ ಮಾದರಿಗಳು ಕಳಪೆಯಾಗಿವೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಹೇಳಿದೆ.
ಸೋಮವಾರ ಪ್ರಕಟನೆ ಹೊರಡಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ಯಾಕೇಜ್ಡ್ ಕುಡಿಯುವ ನೀರು, ದಾವಣಗೆರೆ ಮತ್ತು ಮೈಸೂರಿನ ರಸ್ಕ್, ಬೆಂಗಳೂರಿನ ಚಿಕನ್ ಕಬಾಬ್, ಮೈಸೂರಿನ ಬೆಲ್ಲದ ಅಚ್ಚು, ಕಲಬುರಗಿಯ ಬಾಳೆಕಾಯಿ ಚಿಪ್ಸ್, ಖಾರ ಬೂಂದಿ, ಮಿಕ್ಸ್ ಮಸಲಾ, ಬೆಳಗಾವಿಯ ಪಿಂಕ್ ಮತ್ತು ಗ್ರೀನ್ ಕ್ರೀಮ್ ಕೇಕ್‍ನ ಮಾದರಿಗಳು ಅಸುರಕ್ಷಿತವಾಗಿದೆ ಎಂದು ತಿಳಿಸಿದೆ.
ದಕ್ಷಿಣ ಕನ್ನಡ, ಮಂಡ್ಯ, ವಿಜಯನಗರ, ಹಾಸನ, ಚಿಕ್ಕಮಗಳೂರು, ಬೀದರ್, ಬಾಗಲಾಕೋಟೆಯಲ್ಲಿ ಅಯೋಡಿನ್ ಉಪ್ಪಿನ ಮಾದರಿ ಮತ್ತು ವಿಜಯಪುರ, ಹಾವೇರಿಯ ಮೆಣಸಿನ ಪುಡಿ ಮಾದರಿ, ಮೈಸೂರಿನ ಚಿಕನ್ ಮಸಾಲಾ ಮಾದರಿ, ಗದಗದ ಕಡಲೆಕಾಯಿ ಎಣ್ಣೆ ಮಾದರಿ ಕಳಪೆಯಾಗಿದೆ ಎಂದು ತಿಳಿಸಿದೆ.