×
Ad

ಹುಲಿ ಉಗುರು ಹೋಲುವ 2 ಪೆಂಡೆಂಟ್ ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು

Update: 2023-10-31 18:23 IST

ಹುಬ್ಬಳ್ಳಿ: ಇಲ್ಲಿನ ಕೋಯಿನ್ ರಸ್ತೆಯ ಉದ್ಯಮಿಗಳಾದ ವಜ್ರಮನಿ ಶಿರಕೋಳ ಮತ್ತು ಅಯ್ಯಪ್ಪ ಶಿರಕೋಳ ಅವರ ಮನೆ ಮತ್ತು ಕಚೇರಿ ಪರಿಶೀಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಎರಡು ಹುಲಿ ಉಗುರಿನ ಪೆಂಡೆಂಟ್ ವಶಪಡಿಸಿಕೊಂಡಿದ್ದಾರೆ.

ವಲಯ ಅರಣ್ಯಧಿಕಾರಿ ಆರ್.ಎಸ್. ಉಪ್ಪಾರ ನೇತೃತ್ವದ ತಂಡ ಶೋಧ ನಡೆಸಿದೆ. ʼಇದು ನಕಲಿ‌‌ ಹುಲಿ ಉಗುರು. ಇವುಗಳನ್ನು ಜಾತ್ರೆಯಲ್ಲಿ ಖರೀದಿ ಮಾಡಿದ್ದುʼʼ ಎಂದು ಅಧಿಕಾರಿಗಳಿಗೆ ಉದ್ಯಮಿಗಳಾದ ವಜ್ರಮುನಿ ಮತ್ತು ಅಯ್ಯಪ್ಪ ತಿಳಿಸಿದ್ದಾರೆನ್ನಲಾಗಿದೆ.

ಇತ್ತೀಚೆಗೆ  ಸಾಮಾಜಿಕ ಜಾಲತಾಣಗಳಲ್ಲಿ ಉದ್ಯಮಿಗಳು ಹುಲಿ ಉಗುರು ಹೋಲುವ ಪೆಂಡೆಂಟ್ ಧರಿಸಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಉದ್ಯಮಿಗಳ ಮನೆ ಪರಿಶೀಲಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News