×
Ad

ಉಪಾಹಾರ ಕೂಟದಿಂದ ರಾಜಕೀಯ ಚರ್ಚೆ ತಿಳಿಯಾಗಿದೆ : ಜಿ.ಪರಮೇಶ್ವರ್

Update: 2025-12-03 18:10 IST

ಜಿ.ಪರಮೇಶ್ವರ್

ಬೆಂಗಳೂರು : ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವಿನ ಉಪಾಹಾರ ಕೂಟದಿಂದ ರಾಜಕೀಯ ಚರ್ಚೆ ತಿಳಿಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಾಹಾರ ಕೂಟ ಸಂದರ್ಭದಲ್ಲಿ ಯಾವ ವಿಷಯ ಚರ್ಚೆ ನಡೆಸಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ, ಹೊರಗಡೆ ನಡೆಯುತ್ತಿದ್ದ ರಾಜಕೀಯ ಚರ್ಚೆ ತಿಳಿಯಾಗಿದೆ.ಇದರಲ್ಲಿ ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುವುದು ಗೊತ್ತಾಗಿದೆ ಎಂದರು.

ಕೆಲವರು ಅಧಿಕಾರ ಹಂಚಿಕೆ ಸಂಬಂಧ ಅನಾವಶ್ಯಕವಾಗಿ ಗೊಂದಲ ಸೃಷ್ಟಿ ಮಾಡಿದ್ದರು. ಇದಕ್ಕೆ ಮಾಧ್ಯಮಗಳ ಸಹಾಯ ಕಂಡುಬಂದಿದೆ. ಆದರೆ, ಈಗ ಎಲ್ಲವೂ ತಿಳಿಯಾಗಿದೆ ಎಂದುಕೊಂಡಿದ್ದೇನೆ ಎಂದೂ ಸಚಿವರು ಉಲ್ಲೇಖಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News