ಸರಕಾರಿ ನೌಕರರ ವರ್ಗಾವಣೆ ಅವಧಿ ಜು.31ರ ವರೆಗೆ ವಿಸ್ತರಣೆ
Update: 2026-07-15 20:03 IST
ಬೆಂಗಳೂರು : ರಾಜ್ಯ ಸರಕಾರವು 2026-27ನೇ ಸಾಲಿನ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು 2026ರ ಜುಲೈ 31ರ ವರೆಗೆ ವಿಸ್ತರಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸರಕಾರದ ಉಪ ಕಾರ್ಯದರ್ಶಿ ಎಸ್.ಆರ್.ಶಿವಶಂಕರ್ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.
2026ರ ಎಪ್ರಿಲ್ 15ರಿಂದ 2026ರ ಮೇ 31ರ ವರೆಗೆ ನಿಗದಿಪಡಿಸಲಾಗಿದ್ದ ವರ್ಗಾವಣೆ ಅವಧಿಯನ್ನು, ಆಡಳಿತಾತ್ಮಕ ಅಗತ್ಯತೆಗಳನ್ನು ಪರಿಗಣಿಸಿ ವಿಸ್ತರಿಸಲಾಗಿತ್ತು. ಜೂನ್ 1 ಮತ್ತು ಜೂನ್ 30ರಂದು ಹೊರಡಿಸಿದ ಆದೇಶಗಳ ಅನ್ವಯ ಈ ಅವಧಿಯನ್ನು ಜುಲೈ 15ರ ವರೆಗೆ ಮುಂದೂಡಲಾಗಿತ್ತು. ಇದೀಗ ಜುಲೈ 31ರ ವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.