×
Ad

‘ಮಾನಸಿಕ ಆರೋಗ್ಯ ಚಿಕಿತ್ಸೆ’ಗೆ ಜಿಲ್ಲಾ ಆಸ್ಪತ್ರೆಗಳಲ್ಲಿ ಬೆಡ್ ಮೀಸಲಿಡುವಂತೆ ಸರಕಾರ ಆದೇಶ

Update: 2024-08-27 21:40 IST

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ಮಾನಸಿಕ ಆರೋಗ್ಯ ಅಸ್ವಸ್ಥತೆ ಹೊಂದಿರುವ ನಿರಾಶ್ರಿತ ರೋಗಿಗಳಿಗೆ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಟ 5 ಬೆಡ್‍ಗಳನ್ನು ಮೀಸಲಿಡುವಂತೆ ಸರಕಾರ ಆದೇಶ ಹೊರಡಿಸಿದೆ.

ನಿರಾಶ್ರಿತ ವ್ಯಕ್ತಿಗಳಿಗೆ ಮಾನಸಿಕ ಸೇವೆಗಳ ನೀಡುವ ಕುರಿತಾಗಿ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ನೇತೃತ್ವದಲ್ಲಿ ಸರಕಾರವು ಸಮಿತಿಯನ್ನು ರಚನೆ ಮಾಡಿತ್ತು. ಸಮಿತಿಯು ವರದಿಯನ್ನು ಸಲ್ಲಿಸಿದ್ದು, ಅದರಂತೆ ಸರಕಾರ ಕ್ರಮ ವಹಿಸಿ ಆದೇಶ ಹೊರಡಿಸಿದೆ.

ನಿರಾಶ್ರಿತರಿಗೆ ಉಚಿತ ಸೇವೆಯನ್ನು ನೀಡುವುದು ಸರಕಾರದ ಜವಾಬ್ದಾರಿಯಾಗಿದೆ. ಹೀಗಾಗಿ ಸರಕಾರವು ಗೊತ್ತುಪಡಿಸುವ/ನಿರ್ದಿಷ್ಟಪಡಿಸುವ ಮಾನಸಿಕ ಆರೋಗ್ಯ ಸಂಸ್ಥೆಗಳಿಗೆ ಅನುದಾನದ ಅವಶ್ಯಕತೆ ಇದ್ದರೆ, ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News