×
Ad

ಡಿಜಿಟಲ್ ಜಾಹೀರಾತು ನೀಡಲು ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ

Update: 2024-08-27 21:51 IST

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಕಡ್ಡಾಯವಾಗಿ ಎಂಪ್ಯಾನೆಲ್ ಮಾಡಿಕೊಂಡ ಡಿಜಿಟಲ್ ಮಾಧ್ಯಮ ಘಟಕಕ್ಕೆ ರಾಜ್ಯ ಸರಕಾರವು ಡಿಜಿಟಲ್ ಜಾಹೀರಾತನ್ನು ನೀಡಲು ಮುಂದಾಗಿದ್ದು, ಈ ಸಂಬಂಧ ಮಾರ್ಗಸೂಚಿ ಪ್ರಕಟಿಸಲಾಗಿದೆ.

ಡಿಜಿಟಲ್ ಜಾಹೀರಾತನ್ನು ಪಡೆಯಲು ಭಾರತ ಸರಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ರಿಜಿಸ್ಟ್ರಾರ್ ಆಫ್ ಕಂಪೆನೀಸ್ ಮಾನ್ಯವಾದ ಪ್ರಮಾಣಪತ್ರವನ್ನು ಹೊಂದಿರಬೇಕು. ಜಿಎಸ್‍ಟಿ ನೋಂದಣಿ ಸಂಖ್ಯೆ ಇರಬೇಕು. ಒಂದು ಹಣಕಾಸು ವರ್ಷದ ಲೆಕ್ಕಪರಿಶೋಧನ ವರದಿ, ಮೂರು ವರ್ಷಗಳು ಆದಾಯ ತೆರಿಗೆ ದಾಖಲೆಗಳು ಬೇಕು.

ಇದಲ್ಲದೆ ಕರ್ನಾಟಕ ರಾಜ್ಯ ಮಾಧ್ಯಮ ಪಟ್ಟಿಯಲ್ಲಿರಲು ಉಲ್ಲೇಖಿಸಲಾದ ಎಲ್ಲ ಅರ್ಹತೆಗಳನ್ನು ಹೊಂದಿರಬೇಕು. ಜಾಹೀರಾತು ಏಜೆನಿಗಳ ಮೂಲಕ ಜಾಹೀರಾತನ್ನು ನೀಡಲಾಗುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News