×
Ad

ಇಂಡಿ: ಕಂಟ್ರಿ ಪಿಸ್ತೂಲ್, ಜೀವಂತ ಗುಂಡು ಸಹಿತ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

Update: 2023-08-17 15:52 IST

ಇಂಡಿ: ಕಂಟ್ರಿ ಪಿಸ್ತೂಲ್ ಇರಿಸಿಕೊಂಡು ತಿರುಗಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ, ಆತನಿಂದ ಒಂದು ಕಂಟ್ರಿ ಪಿಸ್ತೂಲ್ ಹಾಗೂ ಎರಡು ಜೀವಂತ ಗುಂಡು ವಶಕ್ಕೆ ಪಡೆದಿದ್ದಾರೆ.

ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಅನೀಲ್ ಊರ್ಫ್ ಸುಖದೇವ ಮಲ್ಲಪ್ಪ ಬಂಡಾರಿ (35)ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಂಡಿ ರೈಲ್ವೆ ಠಾಣೆಯಿಂದ ಅಹಿರಸಂಗ ಗ್ರಾಮದ ಮಾರ್ಗ ಮಧ್ಯೆ ಸಂಚರಿಸುತ್ತಿದ್ದ ಆರೋಪಿ ಅನೀಲ್‌ನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 ಎಸ್‌ಪಿ ಎಚ್.ಡಿ.ಆನಂದಕುಮಾರ್ ನಿರ್ದೇಶನ, ಎಎಸ್‌ಪಿ ಶಂಕರ ಮಾರಿಹಾಳ ಅವರ ಮಾರ್ಗದರ್ಶನ ಹಾಗೂ ಡಿವೈಎಸ್‌ಪಿ ಚಂದ್ರಕಾಂತ ನಂದರಡ್ಡಿ ಮತ್ತು ಸಿಪಿಐ ರತನಕುಮಾರ ಜೀರಗಾಳ ಇವರ ಯೋಜನೆ ಪ್ರಕಾರ ಪಿಎಸ್‌ಐ ಸೋಮೇಶ ಗೆಜ್ಜಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಸಾಕ್ಷೃ ಸಮೇತ ವಶಕ್ಕೆ ಪಡೆದಿದೆ. ತಂಡದಲ್ಲಿ ಎಸ್.ವೈ. ಜೇರಟಗಿ, ಆರ್.ಪಿ. ಗಡೇದ, ಎಂ.ಎಸ್.ಕೂಡಿಗನೂರ, ರವಿ ಕೋಟೆ, ಎಸ್.ಎಸ್. ತಳವಾರ ಮತ್ತು ಪುಂಡಲೀಕ ಬಿರಾದಾರ ಇದ್ದು, ಇವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News