ಬೆಂಗಳೂರು ನಗರದ ಡ್ರೈಫ್ರೂಟ್ಸ್ ಮಳಿಗೆ, ಮಾಲಕರ ಮನೆಗಳ ಮೇಲೆ ಐಟಿ ದಾಳಿ
Update: 2023-11-16 13:00 IST
Photo -PTI
ಬೆಂಗಳೂರು: ತೆರಿಗೆ ವಂಚನೆ ಬಗ್ಗೆ ಬಂದ ಮಾಹಿತಿ ಆಧರಿಸಿ ಗುರುವಾರ ಬೆಳಗ್ಗೆ ಪ್ರತ್ಯೇಕ ತಂಡಗಳ ಮೂಲಕ ನಗರದಲ್ಲಿರುವ ಪ್ರಮುಖ ಡ್ರೈ ಫ್ರೂಟ್ಸ್ ಮಳಿಗೆಗಳು ಹಾಗೂ ಆಹಾರ ಉತ್ಪಾದನಾ ಘಟಕಗಳ ಮೇಲೆ ಆದಾಯ ತೆರಿಗೆ ಇಲಾಖೆಯ (ಐಟಿ) ಅಧಿಕಾರಿಗಳು ದಾಳಿ ಮಾಡಿದ್ದಾರೆ.
ನಗರದ ರಾಜಾಜಿನಗರ, ಬಿವಿಕೆ ಅಯ್ಯಂಗಾರ್ ಹಾಗೂ ಇತರೆ ಸ್ಥಳಗಳಲ್ಲಿರುವ ಡ್ರೈ ಫ್ರೂಟ್ಸ್ ಅಂಗಡಿ, ಮಾಲಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸುತಿದ್ದಾರೆ.
ರಾತ್ರಿಯವರೆಗೂ ಶೋಧ ನಡೆಯಲಿದೆ. ಆ ನಂತರವೇ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.