×
Ad

ನಿಯಮದ ಪ್ರಕಾರ ರಾಜ್ಯ ಸರಕಾರ ಉಲ್ಲೇಖಿಸಿದ ಭಾಷಣವನ್ನು ರಾಜ್ಯಪಾಲರು ಓದುವುದು ಕರ್ತವ್ಯ: ಬಸವರಾಜ ಹೊರಟ್ಟಿ

Update: 2026-01-21 22:17 IST

ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ 

ಬೆಂಗಳೂರು: ತಮಿಳುನಾಡು, ಕೇರಳ ರಾಜ್ಯದಲ್ಲಿ ರಾಜ್ಯಪಾಲರ ಭಾಷಣ ವೇಳೆ ಸಂಘರ್ಷಣೆ ಮಾದರಿ ರಾಜ್ಯದಲ್ಲಿ ಸಂಭವಿಸುವುದಿಲ್ಲ, ನನಗೆ ಸಂಪೂರ್ಣ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿಯಮದ ಪ್ರಕಾರ ರಾಜ್ಯ ಸರಕಾರ ಉಲ್ಲೇಖಿಸಿದ ಭಾಷಣವನ್ನು ರಾಜ್ಯಪಾಲರು ಓದುವುದು ಕರ್ತವ್ಯ. ಅದನ್ನು ಅವರು ಮಾಡಲಿದ್ದಾರೆ ಎನ್ನುವ ವಿಶ್ವಾಸ ನನಗಿದೆ. ತಮಿಳುನಾಡು, ಕೇರಳ ರಾಜ್ಯದಲ್ಲಿ ರಾಜ್ಯಪಾಲರ ಭಾಷಣ ವೇಳೆ ಸಂಘರ್ಷಣೆ ಮಾದರಿ ನಮ್ಮಲ್ಲಿ ಆಗುವುದಿಲ್ಲ ಎಂದರು.

ಅದೇ ರೀತಿ, ಸಂವಿಧಾನದ ವಿರೋಧವಾಗಿ ಭಾಷಣವನ್ನು ಸರಕಾರ ನೀಡುವುದಿಲ್ಲ ಎಂಬ ನಂಬಿಕೆ ನಮಗಿದ್ದು, ರಾಜ್ಯಪಾಲರಿಗೆ ಇರಿಸು ಮುರಿಸು ಇದ್ದರೂ ಅದನ್ನು ಅವರು ಓದಲೇಬೇಕು. ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಬೇರೆ ಬೇರೆ ಇದ್ದಾಗ ಈ ರೀತಿ ಆಗುತ್ತೆ ಎಂದು ಬಸವರಾಜ ಹೊರಟ್ಟಿ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News