×
Ad

ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಸೇರಿ 13 ಮಂದಿ ಕಾಂಗ್ರೆಸ್‌ ನಿಂದ ಉಚ್ಚಾಟನೆ

Update: 2023-07-06 22:31 IST

ರಾಜನಂದಿನಿ

ಸಾಗರ : ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೇಸ್ ಪಕ್ಷದಿಂದ ಡಾ. ರಾಜನಂದಿನಿ ಕಾಗೋಡು ಸೇರಿದಂತೆ 13 ಜನರನ್ನು ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಹಾಗೂ ಆಡಳಿತ ಉಸ್ತುವಾರಿ ಸಿ.ಎಸ್.ಚಂದ್ರಭೂಪಾಲ್ ಉಚ್ಛಾಟನೆ ಮಾಡಲಾಗಿದೆ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೇಸ್ ಪ್ರಮುಖರು ಪಕ್ಷವನ್ನು ಬಿಟ್ಟು ಇನ್ನಿತರೆ ಪಕ್ಷಗಳಿಗೆ ಪಕ್ಷಾಂತರ ಮಾಡಿರುವುದು ಮತ್ತು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಹಿನ್ನೆಲೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಶಿಫಾರಸ್ಸಿನಂತೆ ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.

ಡಾ. ರಾಜನಂದಿನಿ, ಹೊನಗೋಡು ರತ್ನಾಕರ್, ತೀ.ನ.ಶ್ರೀನಿವಾಸ್, ಜಿ.ಕೆ.ಭೈರಪ್ಪ, ರಮೇಶ್ ಗಾಳಿಪುರ, ವೆಂಕಟೇಶ ಮೆಳವರಿಗೆ, ಭರ್ಮಪ್ಪ ಅಂದಾಸುರ, ಪ್ರಕಾಶ್ ಲ್ಯಾವಿಗೆರೆ, ಶಿವಪ್ಪ, ಮೋಹನ್, ಅಬ್ದುಲ್ ಹಮೀದ್, ರಮೇಶ್ ಹೊಸಂತೆ, ಎಂ.ಎಚ್.ವೀರೇಂದ್ರ ಮಡಸೂರು ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News