×
Ad

Karnataka Budget 2026 | ʻರೋಹಿತ್ ವೇಮುಲ ಕಾಯ್ದೆʼ ಜಾರಿ; 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ

Update: 2026-03-06 10:32 IST

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ, ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯ ಅವರು ಶುಕ್ರವಾರ (ಮಾ.6) ದಾಖಲೆಯ 17ನೇ ಆಯವ್ಯಯ ಮಂಡಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ.

ರಾಜ್ಯದ ಎಲ್ಲಾ ಸರಕಾರಿ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳ ಮೇಲೆ ನಡೆಯುವ ʻಶೈಕ್ಷಣಿಕ ಮತ್ತು ಸಾಮಾಜಿಕ ದೌರ್ಜನ್ಯʼವನ್ನು ನಿಲ್ಲಿಸಲು ʻರೋಹಿತ್ ವೇಮುಲ ಕಾಯ್ದೆʼಯನ್ನು ಜಾರಿಗೆ ತರಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. 

Live Updates
2026-03-06 08:20 GMT

ವಾಣಿಜ್ಯ ತೆರಿಗೆ ಇಲಾಖೆಗೆ 1 ಲಕ್ಷ 25 ಸಾವಿರ ಕೋಟಿ ರೂಪಾಯಿ ರಾಜಸ್ವ ಸಂಗ್ರಹಣೆ ಗುರಿ ನಿಗದಿ

2026-03-06 08:20 GMT

ಮೈಸೂರು ನಗರವನ್ನು ರಾಜ್ಯದ ಎರಡನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು.

2026-03-06 08:19 GMT

ಎರಡು ಕೋಟಿ ರೂ. ವೆಚ್ಚದಲ್ಲಿ ʻಜಾನಪದ ಸಂಗಮʼ ಸಮಾವೇಶದ ಆಯೋಜನೆ

2026-03-06 08:19 GMT

ವಿರಾಜಪೇಟೆಯಲ್ಲಿ ಕ್ರೀಡಾ ವಸತಿ ನಿಲಯ ನಿರ್ಮಾಣ.

2026-03-06 08:18 GMT

ಅಲ್ಪಸಂಖ್ಯಾತ ಮತ್ತು ಎಸ್​ಸಿ-ಎಸ್​ಟಿ ನಿಗಮಗಳಿಂದ ಪಡೆದ ಸಾಲದ ಬಡ್ಡಿ ಮನ್ನಾ

2026-03-06 08:18 GMT

ʻಸಾಲುಮರದ ತಿಮ್ಮಕ್ಕʼ ಸ್ಮಾರಕ ನಿರ್ಮಾಣ

2026-03-06 08:17 GMT

ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಘಟಕ ಬಲವರ್ಧನೆಗೆ 10 ಕೋಟಿ ರೂ.

2026-03-06 08:17 GMT

ಕೇಂದ್ರ ಪರಿಸರ ಸಚಿವಾಲಯದಿಂದ ಅರಣ್ಯ ತೀರುವಳಿ ಪಡೆದು ಮೇಕದಾಟು ಯೋಜನೆ ಅನುಷ್ಠಾನ

2026-03-06 08:16 GMT

ರಾಮನಗರದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣ

2026-03-06 08:16 GMT

ಕನ್ನಡದಲ್ಲಿಯೇ ಎಲ್ಲಾ ಕಾನೂನುಗಳ ರಚನೆ ಮತ್ತು ಕೇಂದ್ರದ ಎಲ್ಲಾ ಕಾನೂನುಗಳ ಕನ್ನಡ ಭಾಷಾಂತರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News